ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕೌಂಟೆಂಟ್‌ ಆಗಿದ್ದವನನ್ನು ನಂಬಿ ಮೋಸ ಹೋದೆ: ಬಿ.ಆರ್‌ ಶೆಟ್ಟಿ

Last Updated 1 ಮಾರ್ಚ್ 2021, 11:59 IST
ಅಕ್ಷರ ಗಾತ್ರ

ಉಡುಪಿ: ನಂಬಿದವರು ಬೆನ್ನಿಗೆ ಚೂರಿಹಾಕಿದ ಪರಿಣಾಮ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಬೇಕಾಯಿತು ಎಂದು ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ನೋವಿನಿಂದ ನುಡಿದರು.

ಸೋಮವಾರ ಸರ್ಕಾರಿ ಕೂಸಮ್ಮ ಶಂಭುಶೆಟ್ಟಿ ಮೆಮೊರಿಯಲ್‌ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 10,000 ಮಗು ಜನನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಂಪನಿಯಲ್ಲಿ ಅಕೌಂಟೆಂಟ್‌ ಆಗಿದ್ದ ವ್ಯಕ್ತಿಯನ್ನು ನಂಬಿ ಸಿಎಫ್‌ಒ, ಸಿಇಒ ಜವಾಬ್ದಾರಿ ನೀಡಿದೆ. ಆತ ನಂಬಿಕೆ ದ್ರೋಹ ಎಸಗಿದ. ಈ ವಿಚಾರ ನ್ಯಾಯಾಲಯದಲ್ಲಿದ್ದು ಹೆಚ್ಚು ಮಾತನಾಡುವುದಿಲ್ಲ’ ಎಂದರು.

ನಂಬಿದವರು ಬೆನ್ನಿಗೆ ಚೂರಿಹಾಕಿದರು:

‘2018ರಲ್ಲಿ ಕಂಪೆನಿಯ ಸಂಪತ್ತು ಮೌಲ್ಯ 12.8 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿತ್ತು. ಉದ್ಯಮದಲ್ಲಿ ಅತಿಯಾಗಿ ನಂಬಿದ್ದ ವ್ಯಕ್ತಿಗಳು ವಿಶ್ವಾಸ ದ್ರೋಹಎಸಗಿದ್ದರಿಂದಆರ್ಥಿಕ ಸಂಕಷ್ಟಕ್ಕೆಸಿಲುಕಬೇಕಾಯಿತು ಎಂದು ಬಿ.ಆರ್‌.ಶೆಟ್ಟಿ ಹೇಳಿದರು.

‘ಡೊನಾಲ್ಡ್‌ ಟ್ರಂಪ್‌ಗೆಹಿಂದೆ ಕ್ರೆಡಿಟ್‌ ಕಾರ್ಡ್ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕಿದ್ದವು. ದಿವಾಳಿ ಅಂಚಿಗೆ ತಲುಪಿದ್ದ ಟ್ರಂಪ್‌ ಸವಾಲುಗಳನ್ನು ಮೆಟ್ಟಿ ಅಮೆರಿಕದ ಅಧ್ಯಕ್ಷ ಹುದ್ದೆಗೇರಿದರು. ಅದೇರೀತಿ ಎಲ್ಲ ಸವಾಲುಗಳನ್ನು ಮೀರಿ ಹೊರಬರುವ ವಿಶ್ವಾಸವಿದೆ. ನಾನು ಎಲ್ಲಿಗೂ ಓಡಿಹೋಗುವುದಿಲ್ಲ. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತೇನೆ’ ಎಂದು ಬಿ.ಆರ್. ಶೆಟ್ಟಿ ಹೇಳಿದರು.

ದೇಶ ವಿದೇಶಗಳಲ್ಲಿ247 ಆಸ್ಪತ್ರೆಗಳು ಇದ್ದವು. ಈಗ ಬಹುತೇಕ ಕಳೆದುಕೊಂಡಿದ್ದೇನೆ. ವಿದೇಶಗಳಲ್ಲಿದ್ದ ಉದ್ಯಮ ಭಾರಿ ನಷ್ಟ ಅನುಭವಿಸಿದ್ದರೂ ಭಾರತದಲ್ಲಿ ಒಂದು ರೂಪಾಯಿ ಸಾಲ ಇಲ್ಲ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿದ್ದರೂ ನೆರವು ಕೇಳಿಲ್ಲ. ಕಾರಣ, ನೀರವ್ ಮೋದಿ ಆಯ್ತ, ಮಲ್ಯ ಆಯ್ತು, ಈಗ ಬಿ.ಆರ್‌. ಶೆಟ್ಟಿ ಸರದಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟೀಕಿಸಲು ಶುರುಮಾಡುತ್ತಾರೆ. ಸಮಸ್ಯೆಗಳನ್ನು ಸ್ವತಃ ಬಗೆಹರಿಸಿಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT