ಗುರುವಾರ , ಸೆಪ್ಟೆಂಬರ್ 19, 2019
29 °C
ಕಾಪುವಿನ ಮೂಳೂರಿನ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ

ಪಂಚಕರ್ಮ ಚಿಕಿತ್ಸೆ: ಸಿಎಂ ನಿರ್ಗಮನ

Published:
Updated:
Prajavani

ಪಡುಬಿದ್ರಿ: 5 ದಿನಗಳಿಂದ ಕಾಪು ಸಮೀಪದ ಮೂಳೂರಿನ ಸಾಯಿರಾಧಾ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಶುಕ್ರವಾರ ನಿರ್ಗಮಿಸಿದರು.

ಸಿಎಂಗೆ ಪ್ರಕೃತಿ ಚಿಕಿತ್ಸೆ: ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ಮುಖ್ಯಸ್ಥ ಡಾ.ತನ್ಮಯ್ ಗೋಸ್ವಾಮಿ ಅವರ ನೇತೃತ್ವದ ತಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಪ್ರಕೃತಿ ಚಿಕಿತ್ಸೆ ನೀಡಿತು.

40 ಜನರ ತಂಡದಲ್ಲಿ 4  ಮಂದಿ ತಜ್ಞ ವೈದ್ಯರು, 20 ಮಂದಿ ಟೆಕ್ನಿಷಿಯನ್ಸ್, 16 ಸಿಬ್ಬಂದಿ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು. ಆಯುರ್ವೇದ ಪದ್ಧತಿಯ ಮಸಾಜ್ ಸಹಿತ ಪಂಚಕರ್ಮ ಚಿಕಿತ್ಸೆಯನ್ನು ಇಬ್ಬರು ನಾಯಕರಿಗೂ ನೀಡಲಾಯಿತು.

 ಸಿಟ್ಟು ಇಳಿದಿಲ್ಲ: ಪ್ರಕೃತಿ ಚಿಕಿತ್ಸೆ ಮುಗಿಸಿಕೊಂಡು ನಿರ್ಗಮಿಸುವಾಗಲೂ ಇಬ್ಬರು ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ಕ್ಯಾಮೆರಾಗಳತ್ತ ಮುಖ ಮಾಡದೆ ಕಾರಿನಲ್ಲಿ ಹೊರಟುಬಿಟ್ಟರು. ಸಿಎಂಗೆ ಇನ್ನೂ ಮಾಧ್ಯಮಗಳ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ ಎಂಬುದು ಕಾಣುತ್ತಿತ್ತು. ಮುಖ್ಯಮಂತ್ರಿ ಮೂಳೂರಿನಿಂದ ನೇರವಾಗಿ ಕೊಪ್ಪದತ್ತ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ದೇವೇಗೌಡರು ಬಿ.ಎಂ.ಫಾರೂಖ್ ಅವರ ಕಾರಿನಲ್ಲಿ ಪಯಣ ಬೆಳೆಸಿದರು.

ಸಸ್ಯಾಹಾರ:  ಐದು ದಿನಗಳ ಕಾಲವೂ ಸಿಎಂ ಹಾಗೂ ಮಾಜಿ ಮುಖ್ಯಮಂತ್ರಿಗೆ ಸಸ್ಯಾಹಾರ ಊಟ ನೀಡಲಾಯಿತು. ಬೆಳಿಗ್ಗೆ 7ಕ್ಕೆ ಯೋಗ, 8ಕ್ಕೆ ಫಲಾಹಾರ, ನಂತರ ಪ್ರಕೃತಿ ಚಿಕಿತ್ಸೆ, ಮಧ್ಯಾಹ್ನ ಸಸ್ಯಾಹಾರಿ ಊಟ, ಬಳಿಕ ವಿಶ್ರಾಂತಿ, ಸಂಜೆ 7ಕ್ಕೆ ಮಿತ ಆಹಾರ ನೀಡಲಾಯಿತು.

ಚಿಕಿತ್ಸೆ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ಡಾ.ತನ್ಮಯ್ ಗೋಸ್ವಾಮಿ, ‘ಕುಮಾರ ಸ್ವಾಮಿ ಹಾಗೂ ದೇವೇಗೌಡರಿಗೆ ಪ್ರತಿದಿನ ಯೋಗ, ಲೇಪನ, ಮಸಾಜ್‌, ಯೋಗಿಕ್ ಆಹಾರ ನೀಡಲಾಯಿತು. ಆರೋಗ್ಯ ವರ್ಧನೆ, ದೇಹದ ಪುಷ್ಟೀಕರಣಕ್ಕಾಗಿ ಪಂಚಕರ್ಮ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು. ಹೋಗುವಾಗ ಉಲ್ಲಸಿತರಾಗಿದ್ದು ಕಂಡುಬಂತು. ದೇವೇಗೌಡರು ಮತ್ತೊಮ್ಮೆ ಚಿಕಿತ್ಸೆಗೆ ಬರುತ್ತೇನೆ ಎಂದು ಹೇಳಿದರು’ ಎಂಬುದಾಗಿ ತಿಳಿಸಿದರು.

ಮುಖಂಡರ ಸಾಥ್:  ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಅವರು ಸದಾಕಾಲ ಮುಖ್ಯಮಂತ್ರಿಗಳ ಜತೆಗಿದ್ದು, ರಾಜ್ಯ ರಾಜಕೀಯದ ಬೆಳವಣಿಗೆಯ ಮಾಹಿತಿ ನೀಡಿದರು. ಶುಕ್ರವಾರ ಜೆಡಿಎಸ್ ಮುಖಂಡ ಶಿವರಾಮೇಗೌಡರು ಸಾಥ್ ನೀಡಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಬಾಲಾಜಿ, ವಾಸುದೇವ ರಾವ್, ಜಯರಾಮ ಆಚಾರ್ಯ, ಸುಧಾಕರ ಶೆಟ್ಟಿ ಹೆಜಮಾಡಿ, ಇಸ್ಮಾಯಿಲ್‌ ಪಲಿಮಾರು, ವೆಂಕಟೇಶ್ ಅವರನ್ನು ಬೀಳ್ಕೊಟ್ಟರು.

ಸಿಎಂಗೆ ಸಸ್ಯಾಹಾರ

ಐದು ದಿನಗಳ ಕಾಲವೂ ಸಿಎಂ ಹಾಗೂ ಮಾಜಿ ಪಿಎಂಗೆ ಸಸ್ಯಾಹಾರ ಊಟ ನೀಡಲಾಯಿತು. ಬೆಳಿಗ್ಗೆ 7ಕ್ಕೆ ಯೋಗ, 8ಕ್ಕೆ ಫಲಾಹಾರ, ನಂತರ ಪ್ರಕೃತಿ ಚಿಕಿತ್ಸೆ, ಮಧ್ಯಾಹ್ನ ಸಸ್ಯಾಹಾರಿ ಊಟ, ಬಳಿಕ ವಿಶ್ರಾಂತಿ, ಸಂಜೆ 7ಕ್ಕೆ ಮಿತ ಆಹಾರ ನೀಡಲಾಯಿತು.

ಚಿಕಿತ್ಸೆ ಕುರಿತು ಪ್ರಜಾವಾಣಿ ಜತೆ ಮಾತನಾಡಿದ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ಡಾ.ತನ್ಮಯ್ ಗೋಸ್ವಾಮಿ, ‘ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಪ್ರತಿದಿನ ಯೋಗ, ಲೇಪನ, ಮಸಾಜ್‌, ಯೋಗಿಕ್ ಆಹಾರ ನೀಡಲಾಯಿತು. ಆರೋಗ್ಯ ವರ್ಧನೆ, ದೇಹದ ಪುಷ್ಟೀಕರಣಕ್ಕಾಗಿ ಪಂಚಕರ್ಮ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು. ಹೋಗುವಾಗ ಉಲ್ಲಸಿತರಾಗಿದ್ದು ಕಂಡುಬಂತು. ದೇವೇಗೌಡರು ಮತ್ತೊಮ್ಮೆ ಚಿಕಿತ್ಸೆಗೆ ಬರುವುದಾಗಿ ಹೇಳಿರುವುದಾಗಿ ತಿಳಿಸಿದರು.
ಕರಾವಳಿಗೆ ಮನಸೋತ ನಾಯಕರು

ಉಭಯ ನಾಯಕರಿಗೆ ಚಿಕಿತ್ಸೆ ಕೊಟ್ಟಿದ್ದು ಖುಷಿಯಾಗಿದೆ. ಕರಾವಳಿಯ ಪ್ರಾಕೃತಿಕ ಸಂಪತ್ತನ್ನು ಕಂಡು ಮನಸೋತಿದ್ದಾರೆ. ಕರಾವಳಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸ್ವಚ್ಛ ಕಡಲ ತೀರಕ್ಕೆ ಮನಸೋತಿದ್ದಾರೆ ಎಂದು ತನ್ಮಯ್ ಗೋಸ್ವಾಮಿ ತಿಳಿಸಿದರು.

Post Comments (+)