ಶನಿವಾರ, ಏಪ್ರಿಲ್ 1, 2023
23 °C
ಕಾಂಗ್ರೆಸ್‌ ಕಾರ್ಯಕರ್ತರಿಂದ ಸೈಕಲ್‌ ಜಾಥಾ– ಮಹಿಳೆಯರ ಆಕ್ರೋಶ

ಕೇಂದ್ರದಿಂದ ತೈಲ ಬೆಲೆ ಏರಿಕೆ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಸುತ್ತಿರುವ ವಿರುದ್ಧ ಹೆಬ್ರಿ ಪೇಟೆಯಲ್ಲಿ ಬುಧವಾರ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್‌ ಮಹಿಳಾ ಪ್ರಮುಖರು ಕಾರ್ಯಕರ್ತರು ಅಡುಗೆ ಅನಿಲದ ಸಿಲಿಂಡರ್ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಸೈಕಲ್‌ ಜಾಥಾ ಅಟೋ ರಿಕ್ಷಾ ಎಳೆದುಕೊಂಡು ಬಂದು ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಪಕ್ಷದ ಮುಖಂಡರಾದ ನೀರೆ ಕೃಷ್ಣ ಶೆಟ್ಟಿ, ದಿನೇಶ್ ಶೆಟ್ಟಿ ಹುತ್ತುರ್ಕೆ, ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್ .ಬಿ ಸುರೇಶ್ ಜನಾರ್ದನ್ .ಎಚ್ .ಸಂತೋಷ್ ನಾಯಕ್‌, ಕೃಷ್ಣ ನಾಯ್ಕ್. ಕರುಣಾಕರ ಸೇರಿಗಾರ್. ಶಶಿಕಲಾ ಪೂಜಾರಿ, ರಂಜನಿ ಹೆಬ್ಬಾರ್‌ ಸಹಿತ ಹೆಬ್ರಿ ಹಾಗೂ ಕಾರ್ಕಳದ ಕಾಂಗ್ರೆಸ್ ಪಕ್ಷದ ಪ್ರಮುಖರು, ಮಹಿಳಾ ಕಾರ್ಯಕರ್ತರು. ಎನ್. ಎಸ್. ಯು.ಐ ಸದಸ್ಯರು ಮತ್ತು ಪಕ್ಷದ ಪ್ರಮುಖರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ಬೆಲೆ ಏರಿಕೆ ಖಂಡನೆ

ಪಡುಬಿದ್ರಿ: ತೈಲ ಬೆಲೆ, ದಿನಬಳಕೆ ವಸ್ತುಗಳ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರ ಬಡವರ ಜನ ಸಾಮಾನ್ಯರ ರಕ್ತ ಹೀರುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಫಲಿಮಾರು ಪೇಟೆಯಲ್ಲಿ ಕೇಂದ್ರ ಸರ್ಕಾರದ ತೈಲ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಸುತ್ತಿರುವುದರ ವಿರುದ್ಧ ಸೈಕಲ್ ಜಾಥಾದ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು.

ಕೋವಿಡ್‌ ಸಂದಿಗ್ದ ಪರಿಸ್ಥಿತಿಯಲ್ಲಿ ಉಂಟಾದ ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ತೈಲ ಬೆಲೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರ, ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕಿತ್ತು ಹಾಕಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ನೀಡುವಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದ್ದು, ನ್ಯಾಯಾಲಯದ ಆದೇಶದ ಬಳಿಕ ಎಚ್ಚೆತ್ತುಕೊಂಡು ಲಸಿಕೆ ನೀಡುತ್ತಿದೆ ಎಂದರು.

ಸೈಕಲ್ ಜಾಥಾ: ಪಡುಬಿದ್ರಿ ಸ್ಥಾನೀಯ ಸಮಿತಿ ಪಡುಬಿದ್ರಿ ಪೇಟೆಯಿಂದ ಫಲಿಮಾರುವರಿಗೆ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಚಾಲನೆ ನೀಡಿದರು.

ಫಲಿಮಾರು ಸ್ಥಾನೀಯ ಸಮಿತಿ ನಂದಿಕೂರಿನಿಂದ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಕಾಂಗ್ರೆಸ್ ಮುಖಂಡ ರಾಜಶೇಖರ್ ಕೋಟ್ಯಾನ್ ಚಾಲನೆ ನೀಡಿದರು.

ಮಹಿಳಾ ಕಾರ್ಯಕರ್ತರು ಅಡುಗೆ ಅನಿಲ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನವೀನ್‌ ಚಂದ್ರ ಸುವರ್ಣ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಮುಖಂಡರಾದ ಎಂ.ಪಿ. ಮೊಯಿದಿನಬ್ಬ, ಜಿತೇಂದ್ರ ಪುಟಾರ್ಡೊ, ದಿನೇಶ್ ಕೋಟ್ಯಾನ್, ಕರುಣಾಕರ್ ಪೂಜಾರಿ, ಯಶವಂತ ಪೂಜಾರಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಎಂ.ಎಸ್. ಶಫಿ, ನಿಝಾಮುದ್ದೀನ್, ಅಬ್ದುಲ್ಲ ಫಲಿಮಾರು, ಗಿರಿಯಪ್ಪ ಪೂಜಾರಿ, ವಿಜಯ ಜೆ. ಶೆಟ್ಟಿ, ಯೋಗಾನಂದ, ಜಯಶ್ರೀ, ಶಿವರಾಮ್, ಗೋಪಾಲ ಪೂಜಾರಿ, ಅಮಿತಾ ಪೂಜಾರಿ, ಶಶಿ ಅಡ್ವೆ, ಗಣೇಶ್ ಅವರಾಲ್, ಸುಧೀರ್ ನಂದಿಕೂರು ಇದ್ದರು.

ಬೆಲೆ ಏರಿಕೆಯ ಬರೆ: ಆಕ್ರೋಶ

ಕುಂದಾಪುರ: ಕೋವಿಡ್ ಸಂಕಷ್ಟದ ಕಾಲ ಘಟ್ಟದಲ್ಲಿ ಬೆಲೆ ಏರಿಕೆ ನೀತಿ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಲಾಗುತ್ತದೆ. ಜನರ ಸಂಕಷ್ಟ ಆಲಿಸಲಾರದ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರವಿದೆ ಎಂದು ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಆರೋಪಿಸಿದರು.

ಕುಂದಾಪುರದಲ್ಲಿ ಬುಧವಾರ ಬ್ಲಾಕ್‌ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬೆಲೆ ಏರಿಕೆ ವಿರೋಧಿಸಿ ಸೈಕಲ್‌ ಜಾಥಾ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಭರವಸೆ ಮಾತುಗಳಿಂದ ಅಧಿಕಾರಕ್ಕೆ ಬಂದಿದ್ದ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ ಭರವಸೆ ಮರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ, ಬ್ಲಾಕ್‌ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಪುರಸಭಾ ಸದಸ್ಯ ದೇವಕಿ ಪಿ. ಸಣ್ಣಯ್ಯ, ಶ್ರೀಧರ್ ಶೇರುಗಾರ್, ಚಂದ್ರಶೇಖರ್ ಖಾರ್ವಿ, ಅಬ್ಬು ಮೊಹಮ್ಮದ್, ಪಕ್ಷದ ಪ್ರಮುಖರಾದ ಶಾಲೆಟ್ ರೆಬೆಲ್ಲೊ, ಕೋಣಿ ಕೃಷ್ಣದೇವ ಕಾರಂತ್, ಕೋಣಿ ನಾರಾಯಣ ಆಚಾರ್ಯ, ಚಂದ್ರ ಎ ಅಮೀನ್, ಶೋಭಾ ಸಚ್ಚಿದಾನಂದ, ವಿಜಯ್ ಪುತ್ರನ್, ಆಶಾ ಕರ್ವೆಲ್ಲೊ, ಕೇಶವ್ ಭಟ್, ಗಂಗಾಧರ ಶೆಟ್ಟಿ ಹೇರಿಕುದ್ರು, ಕುಮಾರ್ ಖಾರ್ವಿ, ದಿನೇಶ್ ಖಾರ್ವಿ, ಜ್ಯೋತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.