ಮೀನುಗಾರರ ಪತ್ತೆಗೆ ಪ್ರಧಾನಿಗೆ ಮನವಿ

7
ದೆಹಲಿಗೆ ತೆರಳಿದ ಮೀನುಗಾರರ ನಿಯೋಗ: ಇಂದು ಭೇಟಿ ಸಾಧ್ಯತೆ

ಮೀನುಗಾರರ ಪತ್ತೆಗೆ ಪ್ರಧಾನಿಗೆ ಮನವಿ

Published:
Updated:
Prajavani

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್‌ ಪತ್ತೆಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಮಲ್ಪೆ ಮೀನುಗಾರರ ನಿಯೋಗ ದೆಹಲಿಗೆ ತೆರಳಿದೆ.

ಮಂಗಳವಾರ ಪ್ರಧಾನಿ ಭೇಟಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಭೇಟಿವೇಳೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಬೋಟ್‌ ಪತ್ತೆ ಮಾಡುವಂತೆ ಪ್ರಧಾನಿ ಬಳಿ ಮನವಿ ಮಾಡಲಾಗುವುದು. ನಾಪತ್ತೆಯಾದ ಮೀನುಗಾರ ಕುಟುಂಬಗಳ ಸಂಕಷ್ಟವನ್ನು ವಿವರಿಸಲಾಗುವುದು ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಇದೇವೇಳೆ ಮೀನುಗಾರಿಕಾ ಬೋಟ್‌ಗಳಿಗೆ ಪೂರೈಕೆಯಾಗುವ ಡಿಸೇಲ್‌ ಮೇಲಿನ ರೋಡ್ ಸೆಸ್‌ ವಿನಾಯಿತಿ ನೀಡುವಂತೆ, ಮೀನುಗಾರಿಕಾ ಸಲಕರಣೆಗಳ ಮೇಲಿನ ಜಿಎಸ್‌ಟಿ ಶೂನ್ಯಕ್ಕೆ ಇಳಿಸಬೇಕು. ಹಿಂದಿನಂತೆ ಸಬ್ಸಿಡಿ ದರದಲ್ಲಿ ದೋಣಿಗಳಿಗೆ ಸೀಮೆಎಣ್ಣೆ ವಿತರಿಸಬೇಕು ಎಂಬ ಮನವಿಯನ್ನು ಪ್ರಧಾನಿಗೆ ಸಲ್ಲಿಸಲಾಗುವುದು ಎಂದರು.

ಮತ್ಸ್ಯೋದ್ಯಮ ಸಂಕಷ್ಟದಲ್ಲಿದೆ. ಈ ನಿಟ್ಟಿನಲ್ಲಿ ಮೀನುಗಾರರ ಹಿತ ಕಾಯಲು ರೈಲ್ವೆ ಸಚಿವಾಲಯದಂತೆ, ಮೀನುಗಾರಿಕಾ ಸಚಿವಾಲಯವನ್ನು ರಚಿಸುವಂತೆ ಎಂದು ಒತ್ತಾಯಿಸಲಾಗುವುದು ಎಂದರು.

ಅಖಿಲ ಭಾರತ ಮೀನುಗಾರರ ಸಂಘದ ಮುಖಂಡರು, ಶಾಸಕ ರಘುಪತಿ ಭಟ್‌, ಸಂಸದರು ಹಾಗೂ ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ಯಶಪಾಲ್ ಸುವರ್ಣ, ಕರುಣಾಕರ ಸಾಲಿಯಾನ್‌ ನಿಯೋಗದಲ್ಲಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !