ಬುಧವಾರ, ಆಗಸ್ಟ್ 17, 2022
23 °C
ಕಾಪು ತಾಲ್ಲೂಕಿನಾದ್ಯಂತ ಮಳೆ

ಮಳೆಯಿಂದ ₹ 2.50 ಲಕ್ಷ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಪು (ಪಡುಬಿದ್ರಿ): ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಭಾರಿ ಮಳೆಯಾಗುತಿದ್ದು, ಸೋಮವಾರ ನಸುಕಿನಿಂದ ಎಡೆಬಿಡದೆ ಮಳೆ ಸುರಿಯಿತು.

ಮಳೆಯಿಂದ ತಾಲ್ಲೂಕಿನಲ್ಲಿ ಅಂದಾಜು ₹ 2.50 ಲಕ್ಷ ಮೌಲ್ಯದ ಸೊತ್ತು ಹಾನಿಯಾಗಿದೆ. ಹಲವಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. 

ಭಾನುವಾರ ಸುರಿದ ಗಾಳಿ–ಮಳೆಗೆ ಬೆಳ್ಳೆ ಗ್ರಾಮದ ದೀಪಾ ಅವರ ಮನೆ ಹಾನಿಯಾಗಿದ್ದು, ₹ 2 ಲಕ್ಷ, ಹೆಜಮಾಡಿ ಗ್ರಾಮದ ಜಲೀಲ್ ಮನೆ ಮೇಲೆ ಮರ ಬಿದ್ದು ₹ 25 ಸಾವಿರ, ಫಾರೂಕ್ ಮನೆಗೆ ಮರ ಬಿದ್ದು ₹ 10 ಸಾವಿರ, ಮೂಡಬೆಟ್ಟು ಗ್ರಾಮದ ಸುಗುಣ ಪಾಣಾರ ದನದ ಹಟ್ಟಿ ಮತ್ತು ಶೌಚಾಲಯದ ಮೇಲೆ ಮರ ಬಿದ್ದು ₹ 15 ಸಾವಿರ, ಎಲ್ಲೂರು ಗ್ರಾಮದ ಗೋಪಾಲ ಕೃಷ್ಣ ಅವರ ಅಡಿಕೆ ತೋಟದಲ್ಲಿ 16 ಅಡಿಕೆ ಮರಗಳಿಗೆ ಹಾನಿಯಾಗಿ ₹ 6 ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು