ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿಗೆ ‘ಎ’ ಶ್ರೇಣಿ

ಜಿಲ್ಲೆಯ ಐವರಿಗೆ ಶೇ 100 ಅಂಕ; ಬಾಲಕಿಯರೇ ಮೇಲುಗೈ
Last Updated 19 ಮೇ 2022, 13:16 IST
ಅಕ್ಷರ ಗಾತ್ರ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಉಡುಪಿ ಜಿಲ್ಲೆ ಶೇ 89.46ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.‌

ಐವರು ವಿದ್ಯಾರ್ಥಿಗಳಿಗೆ ಶೇ 100:

ಬೈಂದೂರಿನ ಕಿರಿ ಮಂಜೇಶ್ವರದಲ್ಲಿರುವ ಸಂದೀಪನ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಕ್ಷತಾ, ಕುಂದಾಪುರ ತಾಲ್ಲೂಕು ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ, ಕುಂದಾಪುರದ ಕಾಳಾವರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಶಾ, ಉಡುಪಿಯ ಮಲ್ಪೆಯ ಸರ್ಕಾರಿ ಜೂನಿಯರ್ ಕಾಲೇಜಿನ ಪುನೀತ್ ನಾಯ್ಕ್‌, ಉಡುಪಿಯ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ವಿದ್ಯಾರ್ಥಿನಿ ಗಾಯತ್ರಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಶೇ 100 ಫಲಿತಾಂಶ ಪಡೆದಿದ್ದಾರೆ.

ಶೇ 100 ಅಂಕಪಡೆದುಕೊಂಡಿರುವ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರು ಸರ್ಕಾರಿ ಶಾಲೆಗಳಲ್ಲಿ ಓದಿದವರು ಎಂಬುದು ವಿಶೇಷ. ಫಲಿತಾಂಶ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿರುವ ಶೈಕ್ಷಣಿಕ ಗುಣಮಟ್ಟಕ್ಕೆ ನಿದರ್ಶನ ಎನ್ನಬಹುದು.

ಉಡುಪಿಗೆ ‘ಎ‘ ಗ್ರೇಡ್‌:

ಮೂರು ವರ್ಷಗಳಿಂದ ಶಿಕ್ಷಣ ಇಲಾಖೆ ಶ್ರೇಣಿ ಆಧಾರಿತ ಎಸ್ಸೆಸ್ಸೆಲ್ಸಿ ಫಲಿತಾಂಶ ನೀಡುತ್ತಿದ್ದು 2019–20, 2020–21ರಂತೆ 2021–22ರ ಸಾಲಿನಲ್ಲೂ ಉಡುಪಿ ‘ಎ’ ಶ್ರೇಣಿ ಪಡೆದುಕೊಂಡಿದೆ. 2018–19ರಲ್ಲಿ ಶೇ 89.49ಫಲಿತಾಂಶದೊಂದಿಗೆ ರಾಜ್ಯಕ್ಕೆ 2ನೇ ಸ್ಥಾನ, 2017–18ರಲ್ಲಿ ಶೇ88.18 ಫಲಿತಾಂಶದೊಂದಿಗೆ ಮೊದಲ ಸ್ಥಾನ, 216–17ರಲ್ಲಿ ಶೇ 84.23 ಫಲಿತಾಂಶದೊಂದಿಗೆ ಪ್ರಥಮ, 2015–16ರಲ್ಲಿ ಶೇ 89.64 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು.

141 ಶಾಲೆಗಳಿಗೆ ಶೇ 100 ಫಲಿತಾಂಶ:

13 ಸರ್ಕಾರಿ ಶಾಲೆಗಳು, 2 ಅನುದಾನಿತ ಶಾಲೆಗಳು, 26 ಖಾಸಗಿ ಶಾಲೆಗಳು ಸೇರಿ ಜಿಲ್ಲೆಯಲ್ಲಿ 141 ಶಾಲೆಗಳು ಶೇ 100 ಫಲಿತಾಂಶ ಪಡೆದುಕೊಂಡಿವೆ.

ಈ ಬಾರಿ ಪರೀಕ್ಷೆ ಬರೆದ (ರೆಗ್ಯುಲರ್) 13,672 ವಿದ್ಯಾರ್ಥಿಗಳ ಪೈಕಿ 12,231 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,701 ಬಾಲಕಿಯರ ಪೈಕಿ 6291 (ಶೇ 93.91) ಮಂದಿ ಉತ್ತೀರ್ಣರಾದರೆ, ಪರೀಕ್ಷೆ ಬರೆದ 6,971 ಬಾಲಕರ ಪೈಕಿ 5,938 (ಶೇ 85.18) ಮಂದಿ ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಉಳಿದಂತೆ ಪರೀಕ್ಷೆ ಬರೆದಿದ್ದ 31 ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 8 ಮಂದಿ ಪಾಸಾಗಿದ್ದಾರೆ. 297 ಖಾಸಗಿ ವಿದ್ಯಾರ್ಥಿಗಳ ಪೈಕಿ 27 ಮಂದಿ, 16 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮಾತ್ರ ಉತ್ತೀರ್ಣರಾಗಿದ್ದಾಳೆ.

ತಾಲ್ಲೂಕುವಾರ ಫಲಿತಾಂಶ


ತಾಲ್ಲೂಕು–ಹಾಜರಾದವರು–ಉತ್ತೀರ್ಣ–ಶೇಕಡವಾರು

ಕುಂದಾಪುರ–2,620–2,392–ಶೇ 91.30

ಕಾರ್ಕಳ– 2,602–2,358–90.62

ಬೈಂದೂರು–2,216–1,978–89.26‌

ಉಡುಪಿ–3,488–3,082–88.36

ಬ್ರಹ್ಮಾವರ–2,746–2,421–88.16

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT