ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಹೆ–ಟೀಚ್‌ಸ್ಪೂನ್‌ ಎಡ್‌ಟೆಕ್‌ ನಡುವೆ ಒಪ್ಪಂದ

Published 11 ಜುಲೈ 2024, 6:48 IST
Last Updated 11 ಜುಲೈ 2024, 6:48 IST
ಅಕ್ಷರ ಗಾತ್ರ

ಉಡುಪಿ: ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ಸಹಭಾಗಿತ್ವಕ್ಕಾಗಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ.  ಒಪ್ಪಂದಕ್ಕೆ ಸಹಿ ಹಾಕಿವೆ.

ಜಂಟಿ ಕಾರ್ಯತಂತ್ರ ನಿರ್ವಹಣೆಯ ಕುರಿತ ಈ ಸಹಯೋಗವು ಡಿಜಿಟಲ್‌ ಕಲಿಕೆಗೆ ಅವಕಾಶ ನೀಡುವ ಉಪಕ್ರಮಗಳು, ಶಿಕ್ಷಣ ವಿಷಯದ ಕಾರ್ಯಾಗಾರ ಮತ್ತು ಅಂತರ್ಜಾಲ ಗೋಷ್ಠಿಗಳ ಆಯೋಜನೆ ಮತ್ತು ಜಂಟಿ ಸಂಶೋಧನಾತ್ಮಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಒಡಂಬಡಕೆ ಮಾಡಿಕೊಳ್ಳಲಾಗಿದೆ.

ಒಪ್ಪಂದ ಪತ್ರಕ್ಕೆ ಮಾಹೆಯ ಕುಲಸಚಿವರಾದ ಡಾ. ಗಿರಿಧರ್‌ ಪಿ. ಕಿಣಿ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಲಕ್‌ ಭಂಡಾರಿ ಅವರು ಸಹಿ ಹಾಕಿದರು.

ಟೀಚ್‌ಸ್ಪೂನ್‌ ಎಡ್‌ಟೆಕ್‌  ಸಂಸ್ಥೆಯು ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ನವೋದ್ಯಮವಾಗಿದ್ದು ಇದರ ಸ್ಥಾಪಕರಾದ ಡಾ. ಪಲಕ್‌ ಭಂಡಾರಿ ಅವರು ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ (ಎಂಸಿಒಡಿಎಸ್‌) ನ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಡಾ. ಗಿರಿಧರ ಕಿಣಿ ಅವರು ಮಾತನಾಡಿ, ‘ಮಾಹೆ ಮತ್ತು ಟೀಸ್ಪೂನ್‌ ಎಡ್‌ಟೆಕ್‌ ನಡುವಿನ ಈ ಸಹಭಾಗಿತ್ವವು ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಮಹತ್ತ್ವದ ಪ್ರಯತ್ನವಾಗಿದೆ. ಈ ಒಪ್ಪಂದದ ಮುಖ್ಯ ಆಶಯವು ಡಿಜಿಟಲ್‌ ಕಲಿಕೆಯನ್ನು ವೃದ್ಧಿಪಡಿಸುವುದಾಗಿದೆ. ಈ ಮೂಲಕ ಮಾಹೆಯಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಜ್ಞಾನವನ್ನು ಸಹಭಾಗಿಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ’ ಎಂದರು.

ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಯನ್ಸ್‌ನ ಡೀನ್‌ ಡಾ. ಅಶಿತಾ ಉಪ್ಪೂರ್‌ ಮಾತನಾಡಿ, ದಂತ ವೆದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳು ಸಹಯಾನ ನಡೆಸುವುದರ ಪ್ರಾಮುಖ್ಯವನ್ನು ವಿವರಿಸಿದರು.

ಡಾ. ಪಲಕ್‌ ಭಂಡಾರಿ ಅವರು, ಮಾಹೆಯೊಂದಿಗೆ ತಮ್ಮ ಸಂಸ್ಥೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಡಿಜಿಟಲ್‌ ಕಲಿಕೆಯನ್ನು ಬೆಳೆಸುವುದು ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ ಎರಡೂ ಸಂಸ್ಥೆಗಳು ಕೈಜೋಡಿಸಲಿವೆ. ಅತ್ಯುತ್ತಮ ಗುಣಮಟ್ಟದ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಆಯೋಜಿಸಿ, ಅಭಿವೃದ್ದಿ ಹೊಂದುತ್ತಿರುವ ಡಿಜಿಟಲ್‌ ಶಿಕ್ಷಣ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಗಳನ್ನು ನೀಡಲಿವೆ’ ಎಂದರು.

ಸಾಂಸ್ಥೀಯ ಸಂಬಂಧಗಳ ವಿಭಾಗದ ನಿರ್ದೇಶಕ ಡಾ. ಹರೀಶ್‌ ಕುಮಾರ್‌ ಎಸ್‌.ಸ್ವಾಗತಿಸಿದರು. ಟೀಚ್‌ ಸ್ಪೂನ್‌ನ ಸಾಮಗ್ರಿ ಸಿದ್ಧತಾ ವಿಭಾಗದ ಮುಖ್ಯಸ್ಥರಾದ ಡಾ. ಚಾಂದಿನಿ ಪಿಂಟೊ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT