ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ: ಯಾಂತ್ರೀಕೃತ ಭತ್ತದ ನೇಜಿ ನಾಟಿ

Published 1 ಜುಲೈ 2023, 12:56 IST
Last Updated 1 ಜುಲೈ 2023, 12:56 IST
ಅಕ್ಷರ ಗಾತ್ರ

ಬ್ರಹ್ಮಾವರ: ಯಡ್ತಾಡಿಯ ಸತೀಶ ಕುಮಾರ ಶೆಟ್ಟಿ ಅವರ 4 ಎಕರೆ ಕೃಷಿ ಭೂಮಿಯಲ್ಲಿ ಸತತ 15ನೇ ವರ್ಷದ ಯಾಂತ್ರೀಕೃತ ಭತ್ತದ ನೇಜಿ ನಾಟಿ, ಪರಿಸರದ ರೈತರಿಗೆ ಮಾಹಿತಿ ಕಾರ್ಯಕ್ರಮ ಶನಿವಾರ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಮಾತನಾಡಿ, ‘ಪ್ರಗತಿಪರ ಕೃಷಿಕ ಸತೀಶ್‌ ಕುಮಾರ ಶೆಟ್ಟಿ ಅವರಿಗೆ ಇಳಿ ವಯಸ್ಸಿನಲ್ಲೂ ಕೃಷಿಗೆ ಇರುವ ಉತ್ಸುಕತೆ ಈಗಿನ ಯುವಜನತೆಗೆ ಮಾರ್ಗದರ್ಶಿ. ಯಾಂತ್ರೀಕೃತ ವಿಧಾನದಲ್ಲಿ ಬೇಸಾಯ ಮಾಡಿದರೆ ಭತ್ತದ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯ ಎಂದು ಶೆಟ್ಟಿ ಅವರು ತೋರಿಸಿ ಕೊಟ್ಟಿದ್ದಾರೆ. ಅವರ ಕೃಷಿ ಆಸಕ್ತಿ ಮತ್ತು ಸಾಧನೆ ಅಭಿನಂದನೀಯ’ ಎಂದರು.

ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಬಾರ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ,  ಸತೀಶ ಕುಮಾರ ಅವರಿಂದ ಪ್ರೇರೇಪಿತನಾಗಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.

ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್‌, ಕೃಷಿ ಡಿಪ್ಲೊಮಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್, ಡಾ.ಶಂಕರ್, ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ರಾಜ್, ವಿಆರ್‌ಡಿಎಫ್ ಮಂಗಳೂರಿನ ಕಾರ್ಯದರ್ಶಿ ರಾಜೇಂದ್ರ ರೈ, ಜಂಬೂರು ಕೃಷ್ಣ ಅಡಿಗ, ಪ್ರಗತಿಪರ ಕೃಷಿಕರಾದ ಕೂಡ್ಲಿ ಶ್ರೀನಿವಾಸ ಉಡುಪ, ವಿಮಲಾ ಎಸ್. ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಬಾರ್ಕೂರು ಸೀತಾರಾಮ ಶೆಟ್ಟಿ, ನಿತ್ಯಾನಂದ ಶೆಟ್ಟಿ ಶಿರಿಯಾರ, ಪ್ರಸಾದ ಶೆಟ್ಟಿ ಕೊಳ್ಕೆಬೈಲು, ಸುಬ್ರಾಯ ಆಚಾರ್ಯ, ಫಿರೋಜ್ ಸಾಹೇಬ್ ಇದ್ದರು.

ಸತೀಶ ಕುಮಾರ ಶೆಟ್ಟಿ ಸ್ವಾಗತಿಸಿದರು. ಸಾಕ್ಷ್ಯ ಹೆಗ್ಡೆ ವಂದಿಸಿದರು. ವಿಆರ್‌ಡಿಎಫ್ ಸಿಇಓ ಸಚಿನ್ ಹೆಗ್ಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT