2ನೇ ಹಂತದ ಚುನಾವಣೆ: 373 ನಾಮಪತ್ರ ಸಲ್ಲಿಕೆ
ಉಡುಪಿ: 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ 373 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕುಂದಾಪುರದ 43 ಗ್ರಾಮ ಪಂಚಾಯಿತಿಗಳ 554 ಸ್ಥಾನಗಳಿಗೆ, ಕಾರ್ಕಳದ 27 ಪಂಚಾಯಿತಿಗಳ 399 ಸ್ಥಾನಗಳಿಗೆ ಹಾಗೂ ಕಾಪುವಿನ 16 ಪಂಚಾಯಿತಿಗಳ 290 ಸ್ಥಾನಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 86 ಗ್ರಾಮ ಪಂಚಾಯಿತಿಗಳ 1,243 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಮೊದಲ ದಿನ ಕುಂದಾಪುರದಿಂದ 270, ಕಾರ್ಕಳದಿಂದ 23 ಹಾಗೂ ಕಾಪುವಿನಿಂದ 80 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.