ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಕ್ಕೆ ಸೂಕ್ತ ಕಾನೂನು ರೂಪಿಸಿ: ಸಂಜೀವ

ಜಾನಪದ ಕ್ರೀಡೆಯ ಉಳಿವಿಗಾಗಿ ಸಿದ್ದಾಪುರದಲ್ಲಿ ಬೃಹತ್‌ ಪ್ರತಿಭಟನೆ
Last Updated 30 ಜನವರಿ 2017, 6:41 IST
ಅಕ್ಷರ ಗಾತ್ರ

ಸಿದ್ದಾಪುರ: ಕೃಷಿ ಸಂಸ್ಕೃತಿಯೊಂದಿಗೆ ಬೆಸೆದ ಜಾನಪದ ಕ್ರೀಡೆ ಕಂಬಳ ಜನರ ಜೀವನದೊಂದಿಗೆ ಹಾಸುಹೊಕ್ಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಹೇಳಿದರು.

ಸಿದ್ದಾಪುರ ಕಡ್ರಿ ದೊಡ್ಮನೆ ಅವರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಾನುವಾರ ಸಿದ್ದಾ ಪುರ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮರೆಯಾದರೆ ರೈತರ ಆಚರಣೆ ಮತ್ತು ಮನೋ ರಂಜನೆಗಳಿಗೆ ಧಕ್ಕೆ ತಂದಂತಾಗುತ್ತದೆ. ಇಂತಹ ಆಚರಣೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸರ್ಕಾರದ್ದು. ಕಂಬಳ ಉಳಿವಿಗಾಗಿ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೆ ತಂದು, ಸಂಪ್ರ ದಾಯಬದ್ಧವಾಗಿ ನಡೆಯಲು ಅನು ಕೂಲವಾಗುವಂತೆ ಶಾಸನ ರೂಪಿಸಬೇಕು ಎಂದರು.

ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ ಅವರು ಕಡ್ರಿ ದೊಡ್ಮನೆ ಕಂಬಳ ಮನೆಯಲ್ಲಿ ಪ್ರತಿಭಟನೆಗೆ ಜಾಲನೆ ನೀಡಿ ನಂತರ ಮಾತನಾಡಿ, ಕರಾವಳಿಯ ರೈತಾಪಿ ವರ್ಗ ಭತ್ತ ಕಟಾವಿನ ನಂತರ ತಮ್ಮ ಮನರಂಜನೆ ಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆಗೆ ಹಲವು ವರ್ಷಗಳ ಇತಿಹಾಸವಿದೆ. ಕಂಬಳದಲ್ಲಿ ಯಾವುದೇ ರೀತಿಯ ಹಿಂಸೆಗಳಿಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಕೆ.ವಾಸುದೇವ ಪೈ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಕಾಂಪ್ಕೋ ನಿರ್ದೇಶಕ ಕಿಶೋರ ಕುಮಾರ ಕೊಡ್ಗಿ, ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಸಿದ್ದಾಪುರ ಘಟಕದ ಅಧ್ಯಕ್ಷ ದಿನಕರ ಶೆಟ್ಟಿ, ಬಂದೂರು ಘಟಕದ ಅಧ್ಯಕ್ಷ ಪ್ರದೀಪ ದೇವಾಡಿಗ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಾಂಬ್ಳಿ ಭಾಸ್ಕರ್ ಶೆಟ್ಟಿ, ಸಿದ್ದಾಪುರ- ಹೊಸಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಯಡಿಯಾಳ, ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಮಾನಂಜೆ, ಸಿದ್ದಾಪುರ ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ದಿವಾಕರ ಹೆಗ್ಡೆ, ಸಿದ್ದಾಪುರ ಪಟೇಲ್ ಹೌಸ್‌ನ ಜಯಪ್ರಕಾಶ ಶೆಟ್ಟಿ, ಗೋಪಾಲ ಕಾಂ ಚನ್, ಕಂಬಳ ಮನೆಯವರಾದ ಸತೀಶ ಶೆಟ್ಟಿ ಕಡ್ರಿ, ಜಗದೀಶ ಶೆಟ್ಟಿ ಕಡ್ರಿ, ಹಾರ್ದಳಿ ಸಂತೋಷ್ ಕುಮಾರ ಶೆಟ್ಟಿ ಕಡ್ರಿ, ಕಂಬಳದ ಅಭಿಮಾನಿಗಳು ,  ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಇದ್ದರು.  ಕಡ್ರಿ ದೊಡ್ಮನೆ ಚಂದ್ರಶೇಖರ ಶೆಟ್ಟಿ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT