ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆ–ಅನ್ನದಾನ ಒಂದೇ ನಾಣ್ಯದ ಎರಡು ಮುಖಗಳು

ಪರ್ಯಾಯದ ಅವಧಿಯಲ್ಲಿ ಮತ್ತಷ್ಟು ಸಾಮಾಜಿಕ ಕೆಲಸಗಳು ನಡೆಯಲಿ: ಸ್ವಾಮೀಜಿ
Last Updated 21 ಜನವರಿ 2017, 5:57 IST
ಅಕ್ಷರ ಗಾತ್ರ

ಉಡುಪಿ: ಪಲಿಮಾರು ಮಠದ ವಿದ್ಯಾ ಧೀಶ ಸ್ವಾಮೀಜಿ ಅವರು ಹಿಂದಿನ ಪರ್ಯಾಯದ ಅವಧಿಯಲ್ಲಿ ಚಿಣ್ಣರ ಅನ್ನ ಸಂರ್ಪಣೆ ಕಾರ್ಯಕ್ರಮ ಆರಂಭಿಸುವ ಮೂಲಕ ಕ್ರಾಂತಿಕಾರಿ ಕೆಲಸ ಮಾಡಿ ದ್ದರು. ಅವರ ಆ ನಡೆ ಸರ್ಕಾರದ ಕಣ್ಣನ್ನೂ ತೆರೆಸಿತ್ತು. ಮುಂದಿನ ಪರ್ಯಾ ಯದ ಅವಧಿಯಲ್ಲಿಯೂ ಇಂತಹ ಅನೇಕ ಸಾಮಾಜಿಕ ಕಾರ್ಯಗಳು ಅವ ರಿಂದ ನಡೆಯಲಿ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಪಲಿಮಾರು ಪರ್ಯಾಯದ ಪೂರ್ವ ಭಾವಿಯಾಗಿ ನಡೆದ ಅಕ್ಕಿ ಮುಹೂರ್ತದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗವಂತನ ಪೂಜೆ ಮತ್ತು ಅನ್ನದಾನಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿ ದ್ದಂತೆ. ಭಕ್ತನ ಹಸಿವು ನೀಗಿಸಿದರೆ ಭಗ ವಂತನೂ ಸುಪ್ರಸನ್ನನಾಗುತ್ತಾನೆ.

ಬಡ ವರಿಗೆ ಹಾಗೂ ಜನ ಸಾಮಾನ್ಯರಿಗೆ ಅನ್ನ ದಾನ ಮಾಡುವುದು ಸಹ ಭಗವಂತನ ಸೇವೆಯೇ ಆಗಿದೆ. ಕೃಷ್ಣ ಮಠದಲ್ಲಿ ಅನ್ನ ದಾನ ಹಾಗೂ ಭಗವಂತನ ಸೇವೆ ಎರಡೂ ಮಾಡುವ ಮೂಲಕ ಭಕ್ತ ಮತ್ತು ಭಗವಂತ ಇಬ್ಬರನ್ನೂ ಸಂತೃಪ್ತಿ ಗೊಳಿಸಲಾಗಿದೆ ಎಂದರು.

ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಹಸಿದ ಹೊಟ್ಟೆಗೆ ಅನ್ನ ನೀಡುವುದು ಮಾತ್ರವಲ್ಲ, ಬೌದ್ಧಿಕ ಹಸಿವನ್ನು ನೀಗಿಸಲು ಅಮೂಲ್ಯ ಗ್ರಂಥ ಪ್ರಕಟಿಸಿದ್ದಾರೆ. ಅವರ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.

ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ 800 ವರ್ಷಗಳಿಂದಲೂ ನಿರಂತರವಾಗಿ ಅನ್ನದಾನ ನಡೆಯುತ್ತಿದೆ. ಆಚಾರ್ಯ ಮಧ್ವರಿಂದ ಆರಂಭವಾದ ಈ ಅನ್ನ ಪೂಜೆಯ ವೈಭವಕ್ಕೆ ವಾದಿರಾಜ ಯತಿ ಗಳು ಇನ್ನಷ್ಟು ಮೆರುಗು ನೀಡಿದರು. ಅಷ್ಟಮಠಗಳ ಯತಿಗಳೂ ಈ ಕ್ರಮವನ್ನು ಅಂದಿನಿಂದ ಇಂದಿನವರೆಗೂ ಮುಂದು ವರಿಸಿಕೊಂಡು ಬಂದಿದ್ದಾರೆ. ಆ ಹಾದಿ ಯಲ್ಲಿ ತಾವೂ ನಡೆಯುತ್ತೇವೆ ಎಂದು ವಿದ್ಯಾಧೀಶ ಸ್ವಾಮೀಜಿ ಹೇಳಿದರು.

ಪಿ. ಶೇಷಗಿರಿ ಆಚಾರ್ಯ ಅವರು ಕನ್ನಡಕ್ಕೆ ಅನುವಾದಿಸಿದ ಮಹಾಭಾರತ ‘ವನ ಪರ್ವ’ದ 4 ಸಂಪುಟಗಳು, ಸಟ್ಟಗಿರಿ ಧೀರೇಂದ್ರ ಆಚಾರ್ಯ ಅವರು ಬರೆದ ‘ನ್ಯಾಯಶಾಸ್ತ್ರ’ ಮತ್ತು ಸಗ್ರಿ ರಾಘ ವೇಂದ್ರ ಆಚಾರ್ಯ ಅವರ ‘ಶ್ರೀಕೃಷ್ಣನ ಅನುಸಂಧಾನ’ ಪುಸ್ತಕ ಹಾಗೂ ಪರ್ಯಾಯ ಮಠದ ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು.

ಪಲಿಮಾರು ಪರ್ಯಾಯ ಹಾಗೂ ವಿದ್ಯಾಧೀಶ ಸ್ವಾಮೀಜಿ ಅವರ ಸಂಚಾ ರದ ಬಗ್ಗೆ ಮಾಹಿತಿ ನೀಡಲು ಪ್ರತ್ಯೇ ಕವಾಗಿ ಆರಂಭಿಸರುವ ದೂರವಾಣಿ ಸಂಖ್ಯೆ 94839 92530 ಗೆ ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಚಾಲನೆ ನೀಡಿದರು.

ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ, ಪೇಜಾವರ ಕಿರಿಯ ವಿಶ್ವ ಪ್ರಸನ್ನ ಸ್ವಾಮೀಜಿ, ಕಾಣಿಯೂರು ಮಠ ದ ವಿದ್ಯಾವಲ್ಲಭ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ, ಅದ ಮಾರು ಕಿರಿಯ ಈಶಪ್ರಿಯ ಸ್ವಾಮೀಜಿ, ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಇದ್ದರು. ಪಲಿಮಾರು ಮಠದ ವಿದ್ವಾಂಸ ವಂಶಿಕೃಷ್ಣಾಚಾರ್ಯ ಸ್ವಾಗತಿಸಿ ದರು. ಮಠದ ವ್ಯವಸ್ಥಾಪಕ ಬಲರಾಮ ಭಟ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT