ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಮಿಕರಲ್ಲಿ ಕಾರ್ಮಿಕ ಪ್ರಜ್ಞೆ ಅಗತ್ಯ’

Last Updated 7 ಜನವರಿ 2014, 6:28 IST
ಅಕ್ಷರ ಗಾತ್ರ

ಬದಿಯಡ್ಕ: ‘ಕಾರ್ಮಿಕರಲ್ಲಿ ದೇಶಭಕ್ತಿ ಹಾಗೂ ಕಾರ್ಮಿಕ ಪ್ರಜ್ಞೆ ಅಗತ್ಯ. ಇದರಿಂದಾಗಿ ರಾಷ್ಟ್ರದ ಪ್ರಗತಿ ಸಾಧ್ಯ. ಕೇಂದ್ರದ ಬಾಲಿಶವಾದ ನೀತಿಯಿಂದ ರಾಷ್ಟ್ರದ ಅಭಿವೃದ್ಧಿ ಕುಸಿತ ಕಂಡಿದೆ. ಇದನ್ನು ಕಾರ್ಮಿಕರು ಒಗ್ಗಟ್ಟಾಗಿ ಪ್ರತಿಭಟಿಸಬೇಕಾಗಿದೆ’ ಎಂದು ಭಾರತೀಯ ಮಜ್ದೂರು ಸಂಘದ ಕೇರಳ ರಾಜ್ಯ ಅಧ್ಯಕ್ಷ ವಕೀಲ ಎಂ.ಪಿ ಭಾರ್ಗವನ್ ಹೇಳಿದರು. ಅವರು ಭಾನುವಾರ ಮುಳ್ಳೇರಿಯಾದ ಬಿಎಂಎಸ್‌ ವಲಯ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಬಿ.ಗೋಪಾಲ ಚೆಟ್ಟಿಯಾರ್, ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಎಸ್‌.ಸುರೇಂದ್ರನ್, ಸಾಮಾಜಿಕ ಮುಖಂಡರಾದ ಎಂ.ಪಿ ರಾಜೀವನ್, ಪಿ.ಮುರಳೀಧರನ್, ಜೆ.ಗೋವಿಂದನ್, ವಿ.ವಿ ಬಾಲಕೃಷ್ಣನ್, ಟಿ.ಕೃಷ್ಣನ್, ವಿಎಚ್‌ಪಿ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ ಮೊದಲಾದವರು ಮಾತನಾಡಿದರು. ಬಿ.ದವಾಕರ ಸ್ವಾಗತಿಸಿದರು. ಪಿ.ಸದಾಶಿವ ವಂದಿಸಿದರು. ನಂತರ ಬಿಎಂಎಸ್‌ ಸದಸ್ಯರ ಕುಟುಂಬ ಸಂಗಮ ಕಾರ್ಯಕ್ರಮ ಮುಳ್ಳೇರಿಯಾದ ಗಣೇಶ ಮಂದಿರದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT