ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರ ಕ್ಷೇತ್ರ: 9,010 ಮತದಾರರು

ಮತದಾರರ ಪಟ್ಟಿಗೆ ಸೇರಿಸಲು ಸಲ್ಲಿಕೆಯಾದ 9,174 ಅರ್ಜಿಗಳ ಪೈಕಿ 164 ತಿರಸ್ಕೃತ
Last Updated 28 ನವೆಂಬರ್ 2019, 12:07 IST
ಅಕ್ಷರ ಗಾತ್ರ

ಕಾರವಾರ:ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಚುನಾವಣೆಗೆ ಒಂದೊಂದೇಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯಿಂದ ಕೇವಲ 9,010 ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಒಟ್ಟು 9,174 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ದಾಂಡೇಲಿ ತಾಲ್ಲೂಕಿನಲ್ಲಿ 58, ಶಿರಸಿ ತಾಲ್ಲೂಕಿನಲ್ಲಿ 56, ಕಾರವಾರ ತಾಲ್ಲೂಕಿನಲ್ಲಿ 30 ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ 20, ಒಟ್ಟು 164 ಅರ್ಜಿಗಳುತಿರಸ್ಕೃತವಾಗಿವೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ, ಹುಬ್ಬಳ್ಳಿ– ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರಕ್ಕೆ 2014ರ ಜೂನ್ 20ರಂದು ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ.ಸಂಕನೂರು, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ ಅಭ್ಯರ್ಥಿ ವಸಂತ ಹೊರಟ್ಟಿ ಅವರನ್ನು 14 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.ಆರು ವರ್ಷಗಳ ಅಧಿಕಾರಾವಧಿಯು ಮುಂದಿನ ವರ್ಷ ಜೂನ್‌ ವೇಳೆಗೆ ಅಂತ್ಯವಾಗಲಿದೆ.

ಅಂದು ಸಂಕನೂರು ಅವರಿಗೆ ಮೊದಲ ಪ್ರಾಶಸ್ತ್ಯದ 22,496 ಮತಗಳು ಲಭಿಸಿದ್ದರೆ, ವಸಂತ ಹೊರಟ್ಟಿ 8,589 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿ.ಎಚ್.ನೀರಲಕೇರಿ 4,600 ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರು. ಇದಕ್ಕೂ ಮೊದಲು ಮೂರು ಬಾರಿ ಸ್ಪರ್ಧಿಸಿದ್ದ ಸಂಕನೂರ ಅಂದು ಮೊದಲ ಬಾರಿಗೆ ಜಯ ಸಾಧಿಸಿದ್ದರು. ಒಟ್ಟು 13 ಉಮೇದುವಾರರು ಕಣದಲ್ಲಿದ್ದರು.

ವಿದ್ಯಾವಂತರು ಅಧಿಕವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ, 2011ರ ಜನಗಣತಿ ಪ್ರಕಾರ 14.40 ಲಕ್ಷ ಜನಸಂಖ್ಯೆಯಿದೆ. ಇದರ ಆಧಾರದಲ್ಲಿ ಲೆಕ್ಕಾಚಾರ ಮಾಡಿದರೆ ಜಿಲ್ಲೆಯಲ್ಲಿ ಪದವೀಧರರ ಸಂಖ್ಯೆಯೂ ಹೆಚ್ಚಿದೆ. ಆದರೆ, ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಹೆಚ್ಚಿನವರು ಮುಂದೆ ಬಾರದಿರುವ ವಿಚಾರದಲ್ಲಿ ಜಿಲ್ಲಾಡಳಿತವೂ ಅಸಹಾಯಕವಾಗಿದೆ.

ಈ ಜಿಲ್ಲೆಯಪದವೀಧರರಲ್ಲಿ ಬಹುಪಾಲು ಮಂದಿ ಬೆಂಗಳೂರು, ಹುಬ್ಬಳ್ಳಿ, ಮುಂಬೈ ನಗರಗಳು, ಗೋವಾ ರಾಜ್ಯದ ವಿವಿಧೆಡೆ ಉದ್ಯೋಗ, ವ್ಯವಹಾರದಲ್ಲಿ ನಿರತರಾಗಿದ್ದಾರೆ. ದಾಖಲೆಗಳ ಪ್ರಕಾರ ವಾಸ್ತವ್ಯ ಇಲ್ಲಿದ್ದರೂ ಅವರು ದೂರದ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಪದವೀಧರರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವುದು ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

––––––

ಜಿಲ್ಲೆಯಲ್ಲಿ ಪದವೀಧರ ಮತದಾರರು

ತಾಲ್ಲೂಕು;ಪುರುಷರು;ಮಹಿಳೆಯರು;ಒಟ್ಟು

ಅಂಕೋಲಾ;566;529;1,095

ಭಟ್ಕಳ;296;267;563

ದಾಂಡೇಲಿ;145;203;348

ಹಳಿಯಾಳ;334;277;611

ಹೊನ್ನಾವರ;482;393;875

ಜೊಯಿಡಾ;94;61;155

ಕಾರವಾರ;445;563;1,008

ಕುಮಟಾ;451;437;888

ಮುಂಡಗೋಡ;394;158;552

ಸಿದ್ದಾಪುರ;609;324;932

ಶಿರಸಿ;768;588;1,356

ಯಲ್ಲಾಪುರ;375;252;427

ಒಟ್ಟು;4,959;4,051;9,010

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT