ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಮಾರಾಟ: ಇಬ್ಬರ ಬಂಧನ

Last Updated 27 ಆಗಸ್ಟ್ 2021, 1:21 IST
ಅಕ್ಷರ ಗಾತ್ರ

ಸಿದ್ದಾಪುರ: ಮೋಟಾರ್ ಸೈಕಲ್ ಮೇಲೆ ಗಾಂಜಾ ತಂದು, ಮಾರಾಟ ಮಾಡುತ್ತಿದ್ದ ರಂಜನ ಮಹಾಲೆ ಮತ್ತು ಮಂಜುನಾಥ ಎಂಬವರನ್ನು ತಾಲ್ಲೂಕಿನ ಚುರಿಕಟ್ಟಾ ಕ್ರಾಸ್ ಹತ್ತಿರ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಿಎಸ್ಐ ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿಗಳಿಂದ ಗಾಂಜಾ, ಮೋಟಾರ್ ಸೈಕಲ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಜುಗಾರಿ : ನಗದು ವಶ

ಸಿದ್ದಾಪುರ : ತಾಲ್ಲೂಕಿನ ಬಿಳಗಿಯಲ್ಲಿ ಸಾರ್ವಜನಿಕ ಸ್ಥಳದ ಕಚ್ಚಾ ರಸ್ತೆಯಲ್ಲಿ ಇಸ್ಪೀಟ್, ಜುಗಾರಿ ಆಟ ನಡೆಯುತ್ತಿದ್ದಾಗ ದಾಳಿ ನಡೆಸಿದ ಪಿಎಸ್ಐ ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ 7 ಜನರನ್ನು ಬಂಧಿಸಿದ್ದಾರೆ. ಅವರಿಂದ ₹ 1,250 ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT