ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಕಾನೂನು ಅರಿವು ನೆರವು ಕಾರ್ಯಕ್ರಮ

Last Updated 6 ಜನವರಿ 2022, 5:02 IST
ಅಕ್ಷರ ಗಾತ್ರ

ಅಫಜಲಪುರ: ‘ಕಾನೂನು ಕೇವಲ ವಕೀಲರು, ಪೊಲೀಸ್‍ರಿಗೆ ಗೊತ್ತಿರಬೇಕಾದುದ್ದಲ್ಲ, ದೇಶದ ‌ಎಲ್ಲಾ ಪ್ರಜೆಗಳಿಗೆ ಕಾನೂನಿನ ಮಾಹಿತಿ ಇರುವುದು ಅಗತ್ಯವಾಗಿದೆ’ ಎಂದು ಸಿವಿಲ್ ನ್ಯಾಯಾಧೀಶ ಅಶೋಕ ಟಿ. ಹೇಳಿದರು.

ತಾಲ್ಲೂಕಿನ ಮಲ್ಲಾಬಾದ ಗ್ರಾಮದಲ್ಲಿ ಬುಧುವಾರ ಶ್ರೀ ಹರ್ಷವರ್ಧನ ಪದವಿ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕಾ ನ್ಯಾಯವಾದಿಗಳ ಸಂಘ, ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಮಲ್ಲಾಬಾದ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದವರು.

‘ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರಿಗೆ ಸರಿಯಾಗಿ ಕಾನೂನಿನ ಮಾಹಿತಿ ಇರುವುದಿಲ್ಲ. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಸಿನಿಮಾ, ಹಾಡು, ಮೊಬೈಲ್‍ಗಳಿಂದ ಪ್ರೇರಣೆಗೊಂಡು ಪ್ರೀತಿ, ಪ್ರಣಯ ಅಂತೆಲ್ಲ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಶೃದ್ದೆಯಿಂದ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಪಾಲಕರು, ನೀವು ಕಲಿತ ಶಾಲೆ, ಕಾಲೇಜುಗಳಿಗೆ ಹೆಮ್ಮೆ ತರುವಂತ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಹಿರಿಯ ವಕೀಲರಾದ ಎಸ್.ಜಿ ಹುಲ್ಲೂರ, ಕೆ.ಜಿ ಪೂಜಾರಿ ಮಾತನಾಡಿ ಜನನ ಮರಣ ನೋಂದಣಿ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ. ಸಂಗಣ್ಣ ಎಂ. ಸಿಂಗೆ ಆನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಕೀಲರಾದ ಮಲ್ಲಣಗೌಡ ಪಾಟೀಲ್, ಸುರೇಶ ಅವಟೆ, ಸಿದ್ರಾಮಯ್ಯ ಹಿರೇಮಠ, ಗಡಿನಾಡು ಹೋರಾಟಗಾರ ಸದ್ದಾಂಹುಸೇನ್ ನಾಕೇದಾರ, ಸಂಸ್ಥೆಯ ಸಿಬ್ಬಂದಿಗಳಾದ ಯಲ್ಲಾಲಿಂಗ ಪೂಜಾರಿ, ನಿಂಗಣ್ಣ ಪೂಜಾರಿ, ಸುಧೀರಕುಮಾರ ಬಿಂಜಗೇರಿ, ನಬಿ ದೇವರಮನಿ, ಶಾಹಿನ್ ದೇವರಮನಿ, ಮಲ್ಲಯ್ಯ ಮಠ ಇದ್ದರು. ಯಲ್ಲಾಲಿಂಗ ಮೈಲಾರಿ ನಿರೂಪಿಸಿದರು, ಗುರು ಮಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT