ಭಾನುವಾರ, ಏಪ್ರಿಲ್ 18, 2021
25 °C

ಸ್ಫೋಟದ ವಸ್ತು ಕಚ್ಚಿ ಗಾಯಗೊಂಡ ಜಾನುವಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ತಾಲ್ಲೂಕಿನ ಸನವಳ್ಳಿ ಜಲಾಶಯದ ಸನಿಹ, ಮೇಯಲು ಹೋಗಿದ್ದ ಹೋರಿಯೊಂದು ಬಿದ್ದಿದ್ದ ಸ್ಫೋಟಕ ವಸ್ತುವೊಂದನ್ನು ಕಚ್ಚಿ, ಗಂಭೀರವಾಗಿ ಗಾಯಗೊಂಡಿದೆ.

ಸನವಳ್ಳಿ ಫ್ಲಾಟ್ ನಿವಾಸಿ ಅಪ್ಪು ನಾಯರ್ ಎಂಬುವರಿಗೆ ಸೇರಿದ ಜಾನುವಾರು ಇದಾಗಿದೆ. ಹೋರಿಯ ಬಾಯಿ ಸುಟ್ಟಿದೆ.

ಜಲಾಶಯದ ಸನಿಹ ಕಾಡುಪ್ರಾಣಿಗಳು ನೀರು ಕುಡಿಯಲು ಬರುವ ದಾರಿಯನ್ನೇ ಗಮನಿಸಿ, ಯಾರೋ ದುಷ್ಕರ್ಮಿಗಳು ಕಡಿಮೆ ತೀವ್ರತೆಯ ಸ್ಫೋಟಕ  ಇಟ್ಟಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳದ ಸನಿಹದಲ್ಲಿಯೇ ಉಂಡೆ ಆಕಾರದ ವಸ್ತುವೊಂದು ಸಿಕ್ಕಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.