ಗುರುವಾರ , ನವೆಂಬರ್ 21, 2019
23 °C
ಕೈವಲ್ಯ ಮಠಾಧೀಶರಿಂದ ‘ದಕ್ಷಿಣದ ಸಾರಸ್ವತರು’ ಕೃತಿ ಬಿಡುಗಡೆ

ಜ್ಞಾನ ಗಳಿಕೆಯಿಂದ ಶ್ರೇಷ್ಠ ವ್ಯಕ್ತಿತ್ವ

Published:
Updated:
Prajavani

ಶಿರಸಿ: ಸದ್ಭಾವನೆ, ಗಳಿಸಿದ ಜ್ಞಾನದಿಂದ ವ್ಯಕ್ತಿ ಶ್ರೇಷ್ಠ ವ್ಯಕ್ತಿತ್ವ ಹೊಂದುತ್ತಾನೆ. ನಿರಂತರ ಜ್ಞಾನ ಗಳಿಸಲು ಪುಸ್ತಕದ ಓದು ಸಹಕಾರಿ ಎಂದು ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ನುಡಿದರು. 

ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ನಾಗೇಶ ಸೋಂದೆ ಅವರ ರಚಿಸಿದ, ಪ್ರೊ.ಪಿ.ಎಂ.ಹೆಗಡೆ, ಪ್ರೊ.ಕೆ.ಎ.ಭಟ್ಟ ಅವರು ಅನುವಾದಿಸಿದ ದಕ್ಷಿಣದ ಸಾರಸ್ವತರು' ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪುಸ್ತಕವು ಜಿಎಸ್‌ಬಿ ಸಮುದಾಯದ ಹಿರಿಯರು ಮಾಡಿದ ಸಾಧನೆಗಳು, ಸಮಾಜದ ಗರಿಮೆಗಳು, ಇತಿಹಾಸ, ಜೀವನ ಸಾಧನೆಗಳನ್ನು ಒಳಗೊಂಡಿದೆ. ಸಮುದಾಯದ ಪ್ರತಿಯೊಬ್ಬರೂ ಓದಿದರೆ ಭವಿಷ್ಯ ಕಟ್ಟಲು ವೇದಿಕೆಯಾಗುತ್ತದೆ ಎಂದರು.

ಶಿಕ್ಷಣ ತಜ್ಞ ಮುರಳೀಧರ ಪ್ರಭು ಮಾತನಾಡಿ, ‘ಇತಿಹಾಸ ಬರೆಯಲು ಸಾಕಷ್ಟು ಅಧ್ಯಯನ ಬೇಕು. ಆಳವಾಗಿ ಅಭ್ಯಾಸ ಮಾಡಿದಾಗ ನಿಖರವಾಗಿ ಬರೆಯಲು ಸಾಧ್ಯ. ನಾಗೇಶ ಸೋಂದೆ ನಿರಂತರ ಸಂಶೋಧನೆ ಮೂಲಕ ಅನುಭವವನ್ನು ದಾಖಲಿಸಿದ್ದಾರೆ’ ಎಂದರು.

ಹಿರಿಯ ಸಹಕಾರಿ ವಿ.ಎಸ್.ಸೋಂದೆ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿಯ ವೈದ್ಯ ನರೇಂದ್ರ ಭಟ್ಟ, ಪ್ರಮುಖರಾದ ಗಜಾನನ ಪಾಲೇಕರ ಅಗಡಿ, ಸುನಿಲ್ ಗಾಯತೊಂಡೆ, ಜಯವೀರ ಇಸಳೂರ, ಶಂಕರ ದಿವೇಕರ, ಸುಧಾಕರ ಕಾಮತ, ಪಾಂಡುರಂಗ ಪೈ, ಅಶೋಕ ಪೈ ಇದ್ದರು. ಮಹಾವಿಷ್ಣು ದೇವಾಲಯದ ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಸ್ವಾಗತಿಸಿದರು. ವಾಸುದೇವ ಶಾನಭಾಗ ನಿರೂಪಿಸಿದರು. ಎಂ.ಎಸ್.ಪ್ರಭು ವಂದಿಸಿದರು.

ಪ್ರತಿಕ್ರಿಯಿಸಿ (+)