ಪಾದಯಾತ್ರೆಯಲ್ಲಿ ತೆರಳಿ ದೇವರ ದರ್ಶನ

ಮಂಗಳವಾರ, ಮಾರ್ಚ್ 19, 2019
26 °C

ಪಾದಯಾತ್ರೆಯಲ್ಲಿ ತೆರಳಿ ದೇವರ ದರ್ಶನ

Published:
Updated:
Prajavani

ಭಟ್ಕಳ: ಮಹಾಶಿವರಾತ್ರಿ ನಿಮಿತ್ತ ಇಲ್ಲಿಂದ ಮುರ್ಡೇಶ್ವರಕ್ಕೆ ಸೋಮವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಒಂಬತ್ತನೇ ವರ್ಷದ ಪಾದಯಾತ್ರೆಯಲ್ಲಿ ಮಕ್ಕಳು, ಮಹಿಳೆಯರೂ ಭಾಗವಹಿಸಿದ್ದರು.

ರಂಜನ್ ಇಂಡೇನ್ ಏಜೆನ್ಸಿ ಸಹಯೋಗದಲ್ಲಿ ಬೆಳಿಗ್ಗೆ 4ರ ಸುಮಾರಿಗೆ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲಾಯಿತು. ಶಿವನಾಮ ಸ್ಮರಣೆ, ಶಿವಸ್ತುತಿಯೊಂದಿಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋದರು. ಯಾತ್ರೆಯ ಕೊನೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.

ಯಾತ್ರಿಕರಿಗೆ ಲಘು ಉಪಾಹಾರ ಹಾಗೂ ವಾಪಸ್ ಬರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ರಂಜನ್ ಇಂಡೇನ್ ಏಜೆನ್ಸಿಯ ಶಿವಾನಿ ಶಾಂತಾರಾಮ, ಹಾಗೂ ಶಾಂತಾರಾಮ ಭಟ್ಕಳ್ ಯಾತ್ರೆಯ ನೇತೃತ್ವ ವಹಿಸಿದ್ದರು. ನಗರಠಾಣೆ ಪಿಎಸ್ಐ ಕುಸುಮಾಧರ ಮತ್ತು ಸಿಬ್ಬಂದಿ ಯಾತ್ರೆ ಸಾಗುವ ದಾರಿಯಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !