ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಆರಾಧನೆ ಹಿಂದೂಗಳ ಶಕ್ತಿ: ವಿಖ್ಯಾತಾನಂದ

Last Updated 4 ಮಾರ್ಚ್ 2022, 15:04 IST
ಅಕ್ಷರ ಗಾತ್ರ

ಶಿರಸಿ: ಕ್ಷೇತ್ರ ಆರಾಧನೆ ಹಿಂದೂಗಳ ಶಕ್ತಿಯಾಗಿದೆ. ಹೀಗಾಗಿ ನಮ್ಮ ಸಂಪ್ರದಾಯ ನಾಶ ಮಾಡಲು ಅನ್ಯ ಧರ್ಮೀಯರಿಗೆ ಈವರೆಗೂ ಸಾಧ್ಯವಾಗಿಲ್ಲ ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಡ್ನಾಪುರದ ಬಂಗಾರೇಶ್ವರ ದೇವಸ್ಥಾನದ ಆವರಣದಲ್ಲಿ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಬೌದ್ಧ ಧರ್ಮ, ಇಸ್ಲಾಂ ಧರ್ಮ ಭಾರತೀಯ ನೆಲದಲ್ಲಿ ಗಟ್ಟಿಯಾಗಿ ಬೇರೂರಲು ಯತ್ನಿಸಿ ವಿಫಲತೆ ಕಂಡವು’ ಎಂದರು.

‘ಪಂಚಭೂತಗಳಲ್ಲಿ ದೇವರನ್ನು ಕಾಣಬೇಕು. ಶಾಂತರೂಪಿ ಬಂಗಾರೇಶ್ವರನ ಪೂಜೆ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಶರೀರ ನಾಶವಾಗುವ ಕ್ಷೇತ್ರ. ಆತ್ಮ ಎನ್ನುವುದು ಶಾಶ್ವತವಾಗಿರುವ ಕ್ಷೇತ್ರ’ ಎಂದರು.

ಗುಡ್ನಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಶಂಕರ ಗೌಡರ, ಉಪಾಧ್ಯಕ್ಷೆ ಜ್ಯೋತಿ ಸುಧಾಕರ ನಾಯ್ಕ, ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಬಸಪ್ಪ ಕೆ.ನಾಯ್ಕ, ಬಂಗಾರೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಪಾತಾಳಿ ಇದ್ದರು.

ಶಿವರಾತ್ರಿ ದಿನದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಮಾ.2 ರಂದು ರಥೋತ್ಸವ, ಶುಕ್ರವಾರ ರಾತ್ರಿ ತೆಪ್ಪೋತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT