ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಗರ್ಭಕೋಶದಲ್ಲಿದ್ದ 6 ಕೆ.ಜಿ. ಗಡ್ಡೆ ಹೊರಕ್ಕೆ

ಒಂದೂವರೆ ತಾಸು ಶಸ್ತ್ರಚಿಕಿತ್ಸೆ
Last Updated 26 ಜುಲೈ 2020, 11:25 IST
ಅಕ್ಷರ ಗಾತ್ರ

ಶಿರಸಿ: ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆದಿದ್ದ ಆರು ಕೆ.ಜಿ ತೂಕದ ಗಡ್ಡೆಯನ್ನು ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.

ಹಾನಗಲ್‌ನ ಯಶೋದಾ ಎನ್ನುವವರು ಹೊಟ್ಟೆ ನೋವಿನ ಕಾರಣಕ್ಕೆ ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಿದಾಗ ಗರ್ಭಕೋಶದಲ್ಲಿ ಗಡ್ಡೆಯಲ್ಲಿ ಬೆಳೆದಿರುವುದು ವೈದ್ಯರ ಗಮನಕ್ಕೆ ಬಂದಿದೆ.

ಡಾ. ಮಹೇಶ ಭಟ್ಟ ಅವರು ಅರವಳಿಕೆ ತಜ್ಞೆ ಡಾ.ಪದ್ಮಿನಿ, ನರ್ಸ್‌ಗಳಾದ ಸುಶೀಲಾ ಉಡುಪ, ಸುಜಾತಾ ಶೆಟ್ಟಿ, ಸಹಾಯಕ ನರಸಿಂಹ ಅವರ ಸಹಕಾರದಲ್ಲಿ ಶನಿವಾರ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ, ಮಹಿಳೆಯ ಗರ್ಭಕೋಶದಲ್ಲಿದ್ದ ಗಡ್ಡೆಯನ್ನು ಹೊರತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT