ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡಿನಿಂದ ಒಕ್ಕಲೆಬ್ಬಿಸುವುದು ಖಂಡನೀಯ’

ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದಲ್ಲಿ ತಾಳಮದ್ದಲೆ, ಸಾಹಿತ್ಯ ಗೋಷ್ಠಿ
Last Updated 10 ಅಕ್ಟೋಬರ್ 2019, 12:20 IST
ಅಕ್ಷರ ಗಾತ್ರ

ಕಾರವಾರ:‘ಕಾಡಿನಲ್ಲಿ ವಾಸವಿರುವ ಮನುಷ್ಯರ ಮೂಲಕವೇಕಾಡು ಉಳಿದು, ಬೆಳೆಯುತ್ತದೆ. ಮನುಷ್ಯ ಕಾಡಿನ ನಿರ್ಮಾಪಕ. ಹೀಗಿರುವಾಗ ಕಾಡಿನ ಮಧ್ಯೆ ಇರುವ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಕ್ರಮ ಖಂಡನೀಯ’ ಎಂದು ಹೋರಾಟಗಾರಕಲ್ಕುಳಿ ವಿಠಲ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದಲ್ಲಿ ‘ಕರ್ನಾಟಕ ಅಕ್ಷರ ಸಂಸ್ಥೆ’ಯವರು ಈಚೆಗೆ ವಿಜಯ ದಶಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಲೆಮತ್ತು ಸಾಹಿತ್ಯ ಗೋಷ್ಠಿಯಲ್ಲಿ ಅವರುಮಾತನಾಡಿದರು.

‘ಅರಣ್ಯ ನಿವಾಸಿಗಳು ಕಾಡನ್ನು ದೇವರ ರೂಪದಲ್ಲಿ ಆರಾಧನೆ ಮಾಡುತ್ತ ಬಂದಿದ್ದಾರೆ. ಅದು ಅವರ ಜೀವಂತಿಕೆ ಹಾಗೂ ಕಾಡನ್ನು ಉಳಿಸಿಕೊಳ್ಳುವ ಪರಿಯಾಗಿದೆ. ಸರ್ಕಾರ ಇತ್ತೀಚೆಗೆ ಮಾಡಿರುವ ಅಭಯಾರಣ್ಯದ ಅನೇಕ ಯೋಜನೆಗಳು ಬಹುರಾಷ್ಟ್ರೀಯ ಕಂಪನಿಗಳಿಗೆಮುಖ್ಯವಾಗಿವೆ.ಅದಕ್ಕೆ ನಮ್ಮಲ್ಲಿರುವ ಕೆಲವು ಸರ್ಕಾರೇತರ ಸಂಸ್ಥೆಗಳುಕುಮ್ಮಕ್ಕು ನೀಡಿ ನಮ್ಮ ಕಾಡಿನ ಜನರ ಬದುಕನ್ನು ಬೀದಿಗೆ ತರುವಂತೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಅವರ ಲಾಭಕ್ಕಾಗಿ ನಮ್ಮ ಕಾಡು ಜನರ ಬದುಕು ಅತಂತ್ರವಾಗುತ್ತಿದೆ. ಆದ್ದರಿಂದ ನಮ್ಮ ಪಶ್ಚಿಮ ಘಟ್ಟದ ಜನರ ಬದುಕನ್ನು ಉಳಿಸಿಕೊಳ್ಳಲುಸರ್ಕಾರಕ್ಕೆ ಹೋರಾಟದ ಮೂಲಕ ಎಚ್ಚರಿಕೆ ನೀಡುವ ಅನಿವಾರ್ಯತೆ ಇದೆ’ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ‘ಅರಣ್ಯವಾಸಿಗಳುಕಾಡನ್ನುನಾಶಮಾಡುವವರಲ್ಲ. ತಮ್ಮ ಬದುಕನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಂಡು ಬದುಕಿದವರು. ಅಂತಹವರನ್ನು ಒಕ್ಕಲೆಬ್ಬಿಸುವಂತೆ ಮಾಡುತ್ತಿರುವುದು ಶೋಚನೀಯ.ಅರಣ್ಯದಲ್ಲಿ ಗಿಡ ನೆಟ್ಟವರನ್ನು, ಕಾಡನ್ನು ಉಳಿಸಿಕೊಂಡು ಬದುಕಿದವರನ್ನು ಕಾಡಿನಿಂದಹೊರಹಾಕುವಂತೆ ಮಾಡಿದ್ದಾರೆ. ಅದನ್ನು ಖಂಡಿಸುತ್ತೇವೆ’ ಎಂದು ಹೇಳಿದರು.

ಇದೇವೇಳೆ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂ‍ಪಾದಕ ರವೀಂದ್ರ ಭಟ್ಟ ಅವರಿಗೆ‘ಕರ್ನಾಟಕ ಅಕ್ಷರ ಪ್ರಶಸ್ತಿ’ಪ್ರದಾನ ಮಾಡಲಾಯಿತು.ಪ್ರೊ. ಕೇಶವಶರ್ಮ ಮತ್ತು ಪ್ರೊ.ಎಸ್.ಡಿ. ಹೆಗಡೆ ಅವರ ನೇತೃತ್ವದಲ್ಲಿಯಕ್ಷಗಾನ ತಾಳಮದ್ದಲೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಸಿರವಂತೆ, ಪರಮೇಶ್ವರ, ಯೋಗೇಶ ರಾಯ್ಕರ್, ರಾಮ ಗೌಡ, ತಿಪ್ಪಯ್ಯ ನಾಯ್ಕ ಇದ್ದರು. ಸತೀಶ ಜಿ.ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿವಾಗಿ ಮಾತನಾಡಿದರು. ಪುರುಷೋತ್ತಮ ನಾಯ್ಕ ಮತ್ತು ಗಜಾನನ ಮರಾಠಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ ಮರಾಠಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT