ಬುಧವಾರ, ಅಕ್ಟೋಬರ್ 28, 2020
23 °C

ಕಾರವಾರ: ಕಾಡಿಗೆ ಅಕ್ರಮ ಪ್ರವೇಶ ಆರೋಪ, ಹೊಡೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹಳಿಯಾಳ ತಾಲ್ಲೂಕಿನ ವಿರ್ನೋಲಿಯ (ಪನ್ಸೋಲಿ ವ್ಯಾಪ್ತಿ) ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ವಿಚಾರವಾಗಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮತ್ತು ಸ್ಥಳೀಯರಿಬ್ಬರ ನಡುವೆ ಸೋಮವಾರ ಸಂಜೆ ಹೊಡೆದಾಟವಾಗಿದೆ.

ಗ್ರಾಮಸ್ಥರಾದ ಕೃಷ್ಣ ಶೆಡೇಕರ್ ಮತ್ತು ದೇವರಾಜ ಧರಣಿ ಎಂಬುವವರು ಸಂರಕ್ಷಿತ ಅರಣ್ಯದಲ್ಲಿ ಇದ್ದುದನ್ನು ಅರಣ್ಯ ರಕ್ಷಕರಾದ ಸಂದೀಪ ಗೌಡ, ಬಸವನಗೌಡ ಪ್ರಶ್ನಿಸಿದರು. ಈ ವಿಚಾರ ಮಾತಿಗೆ ಮಾತು ಬೆಳೆದು ಬಡಿದಾಡಿಕೊಳ್ಳುವ ಹಂತಕ್ಕೆ ಹೋಯಿತು. ಗಲಾಟೆಯಲ್ಲಿ ಸಂದೀಪ ಗೌಡ ಮತ್ತು ಕೃಷ್ಣ ಶೆಡೇಕರ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಬ್ಬರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅವರ ವಿರುದ್ಧ ಗ್ರಾಮಸ್ಥರು ದೂರು ಪ್ರತಿ ದೂರು ನೀಡಿದ್ದಾರೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.