ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರ ಧರಣಿ

Last Updated 28 ಮೇ 2019, 11:06 IST
ಅಕ್ಷರ ಗಾತ್ರ

ಶಿರಸಿ: ಹೊಸ ಕೈಗಾರಿಕಾ ಒಪ್ಪಂದ ಜಾರಿ, ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿಕೆ, ಮೋಟಾರ್ ವಾಹನ ಕಾಯಿದೆ ಶಾಶ್ವತ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.

‘ನಾಲ್ಕು ವರ್ಷಗಳ ಕೈಗಾರಿಕಾ ಒಪ್ಪಂದದ ಅವಧಿ ಮುಗಿಯುತ್ತಿದ್ದು, ಹೊಸ ಒಪ್ಪಂದವನ್ನು ಸಂಘದ ಜೊತೆ ಚರ್ಚಿಸಿ ಜಾರಿ ಮಾಡಬೇಕು. ಟೋಲ್ ಫೀ, ಡಿಸೇಲ್ ಮೇಲಿನ ಸುಂಕ ರದ್ದು ಮಾಡಬೇಕು. ನಾಲ್ಕು ನಿಗಮಗಳ ಸಾರಿಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು. ಅಂತರ್ ನಿಗಮ ವರ್ಗಾವಣೆಯನ್ನು ಪುನಃ ಜಾರಿ ಮಾಡಬೇಕು. ಕಾಂಟ್ರಾಕ್ಟ್ ಅನುಮತಿ ಪಡೆದು ಅನಧಿಕೃತವಾಗಿ ಸ್ಟೇಜ್ ಕ್ಯಾರೇಜ್ ಆಗಿ ರಿವರ್ತಿಸಿ ಚಲಿಸುತ್ತಿರುವ ಖಾಸಗಿ ವಾಹನ ಹಾವಳಿ ತಪ್ಪಿಸಬೇಕು. ಹೊಸ ವೈದ್ಯಕೀಯ ಸೌಲಭ್ಯ ನೀಡಲು ಸಮಗ್ರ ಯೋಜನೆ ಜಾರಿಮಾಡಬೇಕು. ವಿಭಾಗದಲ್ಲಿ ಕಾರ್ಮಿಕರಿಗೆ ಕೊಡಬೇಕಿರುವ ಹಿಂಬಾಕಿ, ರಜಾ ನಗದೀಕರಣ ಹಣ, ನಿವೃತ್ತಿ ನೌಕರರಿಗೆ ಕೊಡತಕ್ಕ ಬಾಕಿ ಹಣ, ವೈದ್ಯಕೀಯ ಮರು ವೆಚ್ಚ ಹಣ, ಜೀವವಿಮೆ ಪ್ರೀಮಿಯಂ, ಪತ್ತಿನ ಸಹಕಾರಿ ಸಂಘದ ಒಟ್ಟು ₹ 12 ಕೋಟಿ ತಕ್ಷಣ ಕೊಡಬೇಕು. ಕರಾವಳಿ ಭಾಗಕ್ಕೆ ಹೆಚ್ಚಿನ ಡಬ್ಬಲ್ ಡೋರ್ ಬಸ್ ಪೂರೈಸಬೇಕು. ಕೊರತೆಯಿರುವ ಸಿಬ್ಬಂದಿ ನೇಮಕಾತಿ ಮಾಡಬೇಕು. ಹೊಸ ಘಟಕ ಸ್ಥಾಪಿಸುವಾಗ ಸಿಬ್ಬಂದಿ ವಸತಿ ಗೃಹ ಕಟ್ಟಿಸಬೇಕು. 25 ವರ್ಷ ಕಾರ್ಯನಿರ್ವಹಿಸಿದ ನಿರ್ವಾಹಕರಿಗೆ ವಾರ್ಷಿಕ ಬಡ್ತಿ ನೀಡುತ್ತಿದ್ದು, ಅದನ್ನು ಆಡಳಿತ ಸಿಬ್ಬಂದಿಗೂ ವಿಸ್ತರಿಸಬೇಕು ಸೇರಿದಂತೆ ವಿವಿಧ 30 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಪ್ರಮುಖರಾದ ಪಿ‌.ಎಸ್.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT