ಅರಣ್ಯ ಸಂಚಾರಿ ದಳಕ್ಕೆ ಸಿಬ್ಬಂದಿ ಕೊರತೆ

7
ಒಂದು ವರ್ಷದಲ್ಲಿ 23 ಪ್ರಕರಣಗಳ ಪತ್ತೆ, ನಾಲ್ವರು ಅರಣ್ಯ ರಕ್ಷಕರ ಹುದ್ದೆ ಖಾಲಿ

ಅರಣ್ಯ ಸಂಚಾರಿ ದಳಕ್ಕೆ ಸಿಬ್ಬಂದಿ ಕೊರತೆ

Published:
Updated:
Deccan Herald

ಶಿರಸಿ: ಅರಣ್ಯಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಚುರುಕಿನಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಅರಣ್ಯ ಸಂಚಾರಿ (ಜಾಗೃತ) ದಳವು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಈ ಕಚೇರಿಯಲ್ಲಿ ಮಂಜೂರು ಇರುವ ಒಂದು ಎಸಿಎಫ್ ಹುದ್ದೆ, ನಾಲ್ವರು ಅರಣ್ಯ ರಕ್ಷಕರ ಹುದ್ದೆಗಳು, ತಲಾ ಒಂದು ಫಾರೆಸ್ಟರ್, ಚಾಲಕ ಹುದ್ದೆಗಳು ಖಾಲಿ ಇವೆ. ಪ್ರಸಕ್ತ ಸಾಲಿನಲ್ಲಿ ಸಂಚಾರಿ ದಳದ ಸಿಬ್ಬಂದಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿದ್ದಾರೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಕಾರವಾರ, ಕುಮಟಾ, ಮುಂಡಗೋಡ ಇನ್ನಿತರ ತಾಲ್ಲೂಕುಗಳಲ್ಲಿ 3.190 ಕ್ಯುಬಿಕ್ ಮೀಟರ್ ಸಾಗುವಾನಿ, ಇತರ ಕಟ್ಟಿಗೆ 7.366 ಕ್ಯುಬಿಕ್ ಮೀಟರ್, ಉರುವಲು ಕಟ್ಟಿಗೆ 10.577 ಕ್ಯುಬಿಕ್ ಮೀಟರ್, ಜಂಗ್ಲಿ ಎಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಸುಮಾರು ₹ 5.07 ಲಕ್ಷ ಆದಾಯ ಇಲಾಖೆಗೆ ದೊರೆತಿದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಕೆಲವು ದೂರುಗಳನ್ನು ಆಯಾ ವಲಯಕ್ಕೆ ಸಂಬಂಧಿಸಿದ ಆರ್‌ಎಫ್‌ಒಗಳಿಗೆ ತಿಳಿಸುವ ಅನಿವಾರ್ಯತೆ ಸಂಚಾರಿ ದಳಕ್ಕೆ ಎದುರಾಗಿದೆ.

‘ಕಳಪೆಯಾಗಿರುವ ಸಿವಿಲ್ ಕಾಮಗಾರಿಗಳು, ಅಕ್ರಮ ನಾಟಾ ಸಂಗ್ರಹ, ನೆಡುತೋಪಿನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ದೂರುಗಳು ಈ ಇಲಾಖೆಗೆ ಬರುತ್ತವೆ. 15ಕ್ಕೂ ಹೆಚ್ಚು ಅರ್ಜಿಗಳು ವಿಚಾರಣೆ ಹಂತದಲ್ಲಿವೆ’ ಎನ್ನುತ್ತಾರೆ ಆರ್‌ಎಫ್‌ಒ ಜಿ.ಟಿ.ರೇವಣಕರ್.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿಬ್ಬಂದಿ ನೀಡುವುದಾಗಿ ಮೇಲಧಿಕಾರಿಗಳು ತಿಳಿಸಿದ್ದಾರೆ. ನಮ್ಮಲ್ಲಿರುವ ಸಹಾಯವಾಣಿ ಸಂಖ್ಯೆ 1926 ಇದಕ್ಕೆ ಕರೆ ಮಾಡಿದರೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ದೊರೆಯುತ್ತವೆ. ನೇಮಕಾತಿ, ದೂರು ಅರ್ಜಿ ವಿಚಾರಣೆಯ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬಹುದು. ಸಾರ್ವಜನಿಕರು ಅರಣ್ಯ ಪ್ರಕರಣಗಳಿಗೆ ಸಂಬಂಧಿಸಿ ಯಾವುದೇ ದೂರುಗಳಿದ್ದರೂ ತಿಳಿಸಬಹುದು’ ಎಂದು ಡಿಸಿಎಫ್ ಉದಯ ನಾಯ್ಕ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !