ಮಂಗಳವಾರ, ಆಗಸ್ಟ್ 3, 2021
27 °C

ಶಿರಸಿ: ‘ಚರಂಡಿ ನೀರನ್ನು ಮರಾಠಿಕೊಪ್ಪಕ್ಕೆ ತಿರುಗಿಸಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಶಿರಸಿ-ಯಲ್ಲಾಪುರ ರಸ್ತೆಯ ಕೊಳಚೆ ನೀರನ್ನು ಪುಟ್ಟನಮನೆ ಭಾಗಕ್ಕೆ ಹರಿಸುವ ಯೋಜನೆ ಸಿದ್ಧವಾಗಿರುವ ಮಾಹಿತಿ ಸಿಕ್ಕಿದ್ದು, ಈ ಯೋಜನೆಯನ್ನು ರದ್ದುಪಡಿಸಬೇಕು ಎಂದು ಪುಟ್ಟನಮನೆಯ ಕೃಷಿ ಮತ್ತು ಪರಿಸರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಸಂಘಟನೆಯ ಪದಾಧಿಕಾರಿಗಳು ಸೋಮವಾರ ಸ್ಪೀಕರ್ ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಈ ಸಂಬಂಧ ಮನವಿ ಸಲ್ಲಿಸಿದರು. ಈ ಮಳೆ ನೀರು ಹರಿದು ಹೋಗಲು ಈ ಹಿಂದಿನ ವ್ಯವಸ್ಥೆ ಇರುವಲ್ಲಿಯೇ ರಾಜ ಕಾಲುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. 

ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಹೆಗಡೆ ಮಾತನಾಡಿ, ‘ಮರಾಠಿಕೊಪ್ಪ ಭಾಗಕ್ಕೆ ಹೊಂದಿಕೊಂಡಿರುವ, ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ನಾಕಾ ಕಡೆಯಿಂದ ಹರಿದು ಬರುವ ನೀರು ಅನಾದಿ ಕಾಲದಿಂದಲೂ, ಕೊಳಚೆ ನೀರು ಸಾಗುವ ಚರಂಡಿಯಲ್ಲೇ ಹೋಗುತ್ತಿತ್ತು. ಆದರೆ, ಕೆಲ ಸ್ವ ಹಿತಾಸಕ್ತಿಗಳ ಅಡೆತಡೆಯಿಂದ ಇದಕ್ಕೆ ತಡೆಯೊಡ್ಡಲಾಗಿದೆ. ಪ್ರಸ್ತುತ ಈ ನೀರನ್ನು ಮರಾಠಿಕೊಪ್ಪ ಭಾಗಕ್ಕೆ ಬಿಡಲು, ಆಡಳಿತ ಮತ್ತೊಂದು ಕಾಲುವೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಹೀಗೆ ಮಾಡಿದರೆ, ಪುಟ್ಟನಮನೆಯಲ್ಲಿರುವ ಶುದ್ಧ ನೀರಿನ ಝರಿಗಳು ಹಾಳಾಗುತ್ತವೆ. ಅದಕ್ಕಾಗಿ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಗೋವಿಂದ ಹೆಗಡೆ, ರವಿ ಹೆಗಡೆ, ನಾರಾಯಣ ಹೆಗಡೆ, ಸುಬ್ರಾಯ ಹೆಗಡೆ, ಮನು ಹೆಗಡೆ, ಜಿ.ಎಲ್.ಹೆಗಡೆ, ನಿನಾದ ಹೆಗಡೆ, ಎಲ್.ಆರ್.ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು