ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಹಾನಿಯಾಗದಂತೆ ತಡೆಯಿರಿ

Last Updated 24 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಕಾರವಾರ:ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಪಕ್ಕದಲ್ಲಿ ಸಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಅಪಾಯ ಆಹ್ವಾನಿಸುತ್ತಿದೆ.

ಪತ್ರಿಕಾ ಭವನದ ಎದುರು ಬೀಚ್ ಕಡೆ ಹೋಗುವ ರಸ್ತೆಗೆ ಬ್ಯಾರಿಕೇಡ್, ಕಲ್ಲುಗಳನ್ನು ಇಟ್ಟುವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಆದರೂ ಅದನ್ನು ಸರಿಸಿರುವ ವಾಹನ ಸವಾರರು ಅಲ್ಲೇ ರಸ್ತೆ ದಾಟುತ್ತಿದ್ದಾರೆ. ಇದರಿಂದ ವೇಗವಾಗಿ ಸಾಗುವ ವಾಹನಗಳುಅವರಿಗೆ ಡಿಕ್ಕಿಯಾಗಿ ಜೀವಹಾನಿಯಾಗುವ ಅಪಾಯವಿದೆ.

ಹೊಸದಾಗಿ ನಿರ್ಮಾಣ ಮಾಡಿರುವ ರಸ್ತೆಗೂ ಹಳೆಯ ರಸ್ತೆಗೂ ಸುಮಾರು ಎರಡು ಅಡಿಗಳಷ್ಟು ಅಂತರವಿದೆ. ಅಲ್ಲಿ ಡಾಂಬರು ಹಾಕಿ ತಾತ್ಕಾಲಿಕವಾಗಿ ಇಳಿಜಾರು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿತ್ತು.ಬಳಿಕಅಲ್ಲಿ ಒಂದೆರಡು ಅಪಘಾತಗಳಾದ ಕಾರಣ ಬ್ಯಾರಿಕೇಡ್ ಅಳವಡಿಸಿ ಮುಚ್ಚಲಾಗಿತ್ತು. ಆದರೆ, ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಅಲ್ಲೇ ರಸ್ತೆ ದಾಟುತ್ತಿರುವುದು ಆತಂಕಕಾರಿಯಾಗಿದೆ.

ಹೆದ್ದಾರಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ, ಕಡಲತೀರಕ್ಕೆ ಹೋಗುವವರಿಗೆ ಅನುಕೂಲ ಮಾಡಿಕೊಡಬೇಕು. ಸಂಭವನೀಯ ಜೀವಹಾನಿ ತಡೆಗಟ್ಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT