ಶಿರಸಿ: ನೀರಿನ ಹೊಂಡದಲ್ಲಿ‌ ಬಿದ್ದಿದ್ದ ಮುಳ್ಳು ಹಂದಿ ರಕ್ಷಣೆ

7
ಎರಡೂವರೆ ತಾಸು ಕಾರ್ಯಾಚರಣೆ

ಶಿರಸಿ: ನೀರಿನ ಹೊಂಡದಲ್ಲಿ‌ ಬಿದ್ದಿದ್ದ ಮುಳ್ಳು ಹಂದಿ ರಕ್ಷಣೆ

Published:
Updated:

ಶಿರಸಿ: ನಗರದ ಹೊರವಲಯದಲ್ಲಿರುವ ಡ್ರೀಮ್‌ಪಾರ್ಕ್ ನೀರಿನ ಹೊಂಡದಲ್ಲಿ‌ ಬಿದ್ದಿದ್ದ ಮುಳ್ಳು ಹಂದಿಯನ್ನು ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ, ರಕ್ಷಿಸಲಾಗಿದೆ. 

'ಕಟ್ಟಡದ ತಳಪಾಯ ಹಾಕಲು ಮಾಡಿದ್ದ ದೊಡ್ಡ ಹೊಂಡದಲ್ಲಿ ಮುಳ್ಳು ಹಂದಿ‌ಬಿದ್ದಿರುವುದನ್ನು ಸ್ಥಳೀಯರು ತಿಳಿಸಿದರು. ಉಪಾಯದಿಂದ‌ ಅದನ್ನು ಮೇಲಕ್ಕೆ ಎತ್ತಲಾಯಿತು. ತಪ್ಪಿಸಿಕೊಂಡು ಮುಳ್ಳುಹಂದಿ ಮತ್ತೊಂದು‌ ಹೊಂಡಕ್ಕೆ‌ ಜಿಗಿಯಿತು. ಹೀಗೆ‌ ಮೂರು ಹೊಂಡಗಳಿಗೆ ಜಿಗಿಯಿತು.‌ ನಿರಂತರ ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹಿಡಿದು, ಪಕ್ಕದಲ್ಲಿದ್ದ ಅರಣಕ್ಕೆ‌ ಬಿಡಲಾಯಿತು' ಎಂದು ಉರಗ ತಜ್ಞ ಪ್ರಶಾಂತ ಹುಲೇಕಲ್‌ ತಿಳಿಸಿದರು.

ಅರಣ್ಯ ಇಲಾಖೆ‌ ಸಿಬ್ಬಂದಿ ಅಬ್ದುಲ್ ಸಲಾಂ ಅವರಿಗೆ ನೆರವಾದರು.


ನೀರಿನ ಹೊಂಡದಲ್ಲಿ ಬಿದ್ದಿದ್ದ ಮುಳ್ಳು ಹಂದಿಯನ್ನು ರಕ್ಷಿಸಲಾಯಿತು.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !