ಅಡಿಕೆಗೆ ವ್ಯಾಪಿಸಿದ ಕೊಳೆರೋಗ: ರೈತರಲ್ಲಿ ಆತಂಕ

7
ಶೇ 70ರಷ್ಟು ಬೆಳೆ ನಷ್ಟ

ಅಡಿಕೆಗೆ ವ್ಯಾಪಿಸಿದ ಕೊಳೆರೋಗ: ರೈತರಲ್ಲಿ ಆತಂಕ

Published:
Updated:
Deccan Herald

ಶಿರಸಿ: ತಾಲ್ಲೂಕಿನ ರೇವಣಕಟ್ಟಾ ಸಮೀಪ ಆಡಳ್ಳಿಯಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಕೊಳೆರೋಗ ಹರಡಿದ್ದು, ಪ್ರತಿದಿನ ಎಳೆ ಅಡಿಕೆ ಉದುರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

12ಕ್ಕೂ ಅಧಿಕ ರೈತರ ಸುಮಾರು 18 ಎಕರೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ‘ದಿನದಿಂದ ದಿನಕ್ಕೆ ರೋಗ ಉಲ್ಬಣವಾಗುತ್ತಿರುವುದರಿಂದ ಅಡಿಕೆ ಉದುರುವಿಕೆಯ ಪ್ರಮಾಣವೂ ಹೆಚ್ಚಿದೆ. ಈಗಾಗಲೇ ಶೇ 70ರಷ್ಟು ಅಡಿಕೆ ಉದುರಿದೆ. ನಿರಂತರ ಮಳೆಯಿಂದಾಗಿ ಎರಡನೇ ಸುತ್ತಿನ ಔಷಧ ಸಿಂಪರಣೆ ಸಾಧ್ಯವಾಗುತ್ತಿಲ್ಲ. ಸಂಪೂರ್ಣ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಸ್ಥಳೀಯ ಕೃಷಿಕ ಶಿವರಾಮ ಹೆಗಡೆ.

‘ಕೊಳೆರೋಗದ ಪ್ರಮಾಣ ನೋಡಿದರೆ ಬೆಳೆಯಷ್ಟೆ ಅಲ್ಲ, ಮರವನ್ನು ಉಳಿಸಿಕೊಳ್ಳುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಸಾಲಮಾಡಿದ ರೈತರ ಬದುಕು ಕಷ್ಟಕ್ಕೆ ಸಿಲುಕಿದೆ. 35 ವರ್ಷದ ಈಚೆಗೆ ಈ ರೀತಿ ಕೊಳೆ ಬಂದಿದ್ದನ್ನು ನೋಡಿಲ್ಲ’ ಎಂದು ಅವರು ಹೇಳುತ್ತಾರೆ.

‘ತೋಟದಲ್ಲಿ ಬಸಿಗಾಲುವೆ ನಿರ್ವಹಣೆ ಮಾಡಲಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಅಡಿಕೆಗೆ ಔಷಧ ಸಿಂಪರಣೆಯನ್ನು ಸಹ ಮಾಡಲಾಗಿದೆ. ಆದರೂ, ನಿರಂತರ ಮಳೆಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕೃಷಿ ವೆಚ್ಚವನ್ನು ಸರಿದೂಗಿಸುವಷ್ಟು ಬೆಳೆ ಕೈಗೆ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಕೃಷಿ ಕಾರ್ಮಿಕರ ಕೊರತೆಯಿಂದ ಅಡಿಕೆಗೆ ಮದ್ದು ಹೊಡೆಯಲು ಸಕಾಲದಲ್ಲಿ ಕೊನೆಗೌಡರು ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ರೈತ ವೆಂಕಟರಮಣ ಹೆಗಡೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !