ಯುವತಿಯ ವಿಡಿಯೊ ಮಾಡಿದ ಆರೋಪ: ರೂಂ ಬಾಯ್‌ಗೆ ಥಳಿತ

ಭಾನುವಾರ, ಮೇ 26, 2019
28 °C

ಯುವತಿಯ ವಿಡಿಯೊ ಮಾಡಿದ ಆರೋಪ: ರೂಂ ಬಾಯ್‌ಗೆ ಥಳಿತ

Published:
Updated:

ಭಟ್ಕಳ: ವಸತಿಗೃಹವೊಂದರ ರೂಂ ಬಾಯ್, ಬಿಸಿನೀರಿನ ಗೀಸರ್ ಸ್ವಿಚ್ ಆನ್ ಮಾಡಲು ಸ್ನಾನದಕೋಣೆಯ ಹೊರಗೆ ಬಂದಿದ್ದ. ಆದರೆ ಆತ, ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಎಂದು ಅನುಮಾನಪಟ್ಟ ಸಂಬಂಧಿಕರು ಹಿಗ್ಗಾಮುಗ್ಗ ಥಳಿಸಿದರು. ಅಲ್ಲೇ ಇದ್ದ ಮತ್ತಿಬ್ಬರು ರೂಂ ಬಾಯ್‌ಗಳಿಗೂ ಹೊಡೆದರು.

ಸಮೀಪದ ಮುರ್ಡೇಶ್ವರದ ವಸತಿಗೃಹವೊಂದರಲ್ಲಿ ರೂಂಬಾಯ್‌ಗಳಿಗೆ ಪ್ರವಾಸಿಗರ ಕುಟುಂಬ ಶುಕ್ರವಾರ ಥಳಿಸಿತು. ಪ್ರವಾಸಿಗರು ಸಮುದ್ರ ಸ್ನಾನ ಮಾಡಿ ಬಂದು ವಸತಿಗೃಹದಲ್ಲಿ ಸ್ನಾನ ಮಾಡುತ್ತಿದ್ದರು. ಅಲ್ಲಿಗೆ ಬಂದ ವಸತಿಗೃಹದ ರೂಂ ಬಾಯ್ ಒಬ್ಬ ಕೊಠಡಿಯ ಮೇಲ್ಭಾಗಕ್ಕೆ ಹೋಗಿದ್ದ. ಇದನ್ನು ಗಮನಿಸಿದ ಮತ್ತೊಬ್ಬಳು ಯುವತಿ ಕುಟುಂಬದವರಿಗೆ ತಿಳಿಸಿದಳು. ನಂತರ ಎಲ್ಲರೂ ಸೇರಿ ರೂಂ ಬಾಯ್‌ಗೆ ಥಳಿಸಿದರು. 

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮೊಬೈಲ್ ಪರೀಕ್ಷಿಸಿದರು. ಆದರೆ, ಅದರಲ್ಲಿ ಯುವತಿಯರು ಸ್ನಾನ ಮಾಡುತ್ತಿದ್ದ ಯಾವುದೇ ವಿಡಿಯೊ ಇರಲಿಲ್ಲ.

‘ಆತ ವಸತಿಗೃಹದಲ್ಲಿ ಯುವತಿಯರು ಸ್ನಾನ ಮಾಡುವಾಗ ಬಿಸಿನೀರಿನ ಸ್ವಿಚ್‌ ಆನ್ ಮಾಡಲು ಮೇಲೆ ಹತ್ತಿದ್ದ. ಅದನ್ನು ಕಂಡ ಯುವತಿಯೊಬ್ಬಳು ವಿಡಿಯೊ ಮಾಡಿದ್ದಾಗಿ ತಪ್ಪಾಗಿ ತಿಳಿದಳು. ಇದುವೇ ಅವಾಂತರಕ್ಕೆ ಕಾರಣವಾಯಿತು ಎಂದು ವಸತಿಗೃಹದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಎಲ್ಲರನ್ನೂ ಸಮಾಧಾನ ಮಾಡಿ ಕಳುಹಿಸಲಾಯಿತು’ ಎಂದು ಮುರ್ಡೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !