ಭಾನುವಾರ, ಡಿಸೆಂಬರ್ 15, 2019
26 °C

ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಬದಲು ಬಾಬರಿ ಮಸೀದಿ ಪುನರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ, ಎಸ್‌ಡಿಪಿಐ ಕಾರ್ಯಕರ್ತರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಕೈಗೆ ಕಪ್ಪುಪಟ್ಟಿ ಧರಿಸಿದ್ದ ನೂರಾರು ಕಾರ್ಯಕರ್ತರು, ಈ ಹಿಂದೆ ಬಾಬರಿ ಮಸೀದಿ ಧ್ವಂಸಗೊಳಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ರಾಜ್ಯ ಪ್ರಮುಖ ಅಶ್ರಫ್ ಮಾತನಾಡಿ, ‘ದೇಶದ ಎರಡು ಬೃಹತ್ ಭಯೋತ್ಪಾದಕ ಕೃತ್ಯ ನಡೆದ ತಿಂಗಳು ಡಿಸೆಂಬರ್ ಆಗಿದೆ. ಗಾಂಧೀಜಿ ಹತ್ಯೆ ಹಾಗೂ ಬಾಬರಿ ಮಸೀದಿ ಕೆಡವಿದ ದಿನ ಕರಾಳ ದಿನ ಇದೇ ತಿಂಗಳಿನಲ್ಲಿದೆ. ಸಂಘ ಪರಿವಾರದವರ ಕುತಂತ್ರದಿಂದ ಸಂವಿಧಾನ ಮತ್ತು ಜಾತ್ಯತೀತ ವಿಚಾರದ ಅಧಃಪತನವಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತೆಂದು ವ್ಯಾಪಕ ಪ್ರಚಾರ ಮಾಡಿ, ಬಾಬರಿ ಮಸೀದಿಯನ್ನು ಕಟ್ಟಲು ತೊಡಕು ಮಾಡಲಾಗುತ್ತಿದೆ. ಧರ್ಮ ಒಡೆದು ಮಂದಿರ ನಿರ್ಮಿಸಿದರೆ ಯಾವ ಧರ್ಮ ಉಳಿಯಲು ಸಾಧ್ಯ? ಸಂವಿಧಾನ ಹಾಗೂ ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟುವ ಕನಸು ಕಾಣುತ್ತಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ರಾಮ ಮಂದಿರ ಕಟ್ಟಲು ಬಿಡುವುದಿಲ್ಲ’ ಎಂದರು.

ಸಂಘಟನೆ ಪ್ರಮುಖರಾದ ಮಹಮದ್ ಬ್ಯಾರಿ, ಮೌಸಿನ್ ಹೊನ್ನಾವರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು