ಸೋಮವಾರ, ಸೆಪ್ಟೆಂಬರ್ 16, 2019
21 °C

ಎಸ್ಸೆಸ್ಸೆಲ್ಸಿ ಪರೀಕ್ಷೆ: ಹಳ್ಳಿ ಮಕ್ಕಳ ಶೇ 100 ಸಾಧನೆ

Published:
Updated:

ಕಾರವಾರ: ಜಿಲ್ಲೆಯ ಅತ್ಯಂತ ಕುಗ್ರಾಮಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ತಾಲ್ಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದು ಗಮನ ಸೆಳೆದಿದೆ.

ಜೊಯಿಡಾ ಮತ್ತು ಹಳಿಯಾಳ ತಾಲ್ಲೂಕುಗಳ ಕುಣಬಿ ಜನಾಂಗ ಮತ್ತು ಇತರ ಸ್ಥಳೀಯ ಕುಟುಂಬಗಳ 34 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಅವರ ಪೈಕಿ ಮೂವರು ಶೇ 85ಕ್ಕಿಂತ ಅಧಿಕ, ನಾಲ್ವರು ಶೇ 84, ಇಬ್ಬರು ಶೇ 83, ತಲಾ ಒಬ್ಬ ವಿದ್ಯಾರ್ಥಿಗಳು ಶೇ 81 ಮತ್ತು ಶೇ 80ರಷ್ಟು ಫಲಿತಾಂಶ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೂರಜ ಕುಂಬಗಾಳಕರ ಶೇ 89, ಗಿರಿಜಾ ಬೋಬಾಟೆ ಶೇ 86, ವೈಷ್ಣವಿ ದೇಸಾಯಿ ಶೇ 85, ಸಾಗರ ಕುಂಬಾರಕರ, ರೋಶನ್ ಖಾಜಗಾರ, ದರ್ಶನಾ ವೇಳಿಪ ಹಾಗೂ ಸಾಯೀಶ್ ತಿಳೋಜಿ ಶೇ 84, ಅಮಿತ್ ಗೋವೆಕರ ಶೇ 83, ದೀಪಾ ವೇಳಿಪ ಶೇ 83 (ಕನ್ನಡ ವಿಷಯದಲ್ಲಿ 125 ಅಂಕ), ಮಾನಸಿ ನಾಯ್ಕ ಶೇ 82, ಗೀತಾ ಬೋಬಾಟೆ ಶೇ 81 (ಹಿಂದಿ ವಿಷಯದಲ್ಲಿ 100 ಅಂಕ), ವೀಣಾ ಚೆಂಡೇಕರ್ ಶೇ 80ರಷ್ಟು ಅಂಕ ಪಡೆದಿದ್ದಾರೆ. 

ಬಾಲಮಂದಿರದ ವಿದ್ಯಾರ್ಥಿನಿಯರ ಸಾಧನೆ

ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ವೈಷ್ಣವಿ ಡೊಳ್ಳೇಶ್ವರ 567 (ಶೇ 90.72) ಹಾಗೂ ಭವಾನಿ ಬಿಹಾರಿ 529 (ಶೇ 84.64) ಅಂಕ ಗಳಿಸಿದ್ದಾರೆ.

ಬಾಲಮಂದಿರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಷ್ಟಕರ ಕೌಟುಂಬಿಕ ಪರಿಸರದ ಹಿನ್ನೆಲೆಯಿಂದ ಬಂದು ವಸತಿ ಪಡೆದಿರುವ ಬಾಲಕಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

Post Comments (+)