ಶನಿವಾರ, ಡಿಸೆಂಬರ್ 5, 2020
25 °C

ಶಿರಸಿ ನಗರಸಭೆ: ಬಿಜೆಪಿಗೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ನಗರಸಭೆಯ ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು. ಅಧ್ಯಕ್ಷರಾಗಿ 26ನೇ ವಾರ್ಡಿನ ಸದಸ್ಯ ಬಿಜೆಪಿಯ ಗಣಪತಿ ನಾಯ್ಕ, ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸದಸ್ಯೆ, ಅದೇ ಪಕ್ಷದ ವೀಣಾ ಶೆಟ್ಟಿ ಗೆಲುವು ಸಾಧಿಸಿದರು.

ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ಸಿನ ಪ್ರದೀಪ ಶೆಟ್ಟಿ, ಉಪಾಧ್ಯಕ್ಷ ಹುದ್ದೆಗೆ ಶಮೀನಾ ಬಾನು ನಾಮಪತ್ರ ಸಲ್ಲಿಸಿದ್ದರು. ನಗರಸಭೆಯ ಸಭಾಭವನದಲ್ಲಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.

31 ಸದಸ್ಯರ ಪೈಕಿ 28 ಸದಸ್ಯರು ಮತ ಚಲಾಯಿಸಿದರು. ಮೂವರು ಪಕ್ಷೇತರ ಸದಸ್ಯರು ತಟಸ್ಥರಾಗಿ ಉಳಿದರು.

ಗಣಪತಿ ನಾಯ್ಕ 18 ಮತಗಳನ್ನು ಪಡೆದರು. ಪ್ರದೀಪ ಶೆಟ್ಟಿ 10 ಮತ ಪಡೆದರು. ವೀಣಾ ಶೆಟ್ಟಿ  18 ಮತಗಳನ್ನು ಪಡೆದರೆ, ಶಮೀನಾ ಬಾನು 10  ಮತಗಳನ್ನು ಪಡೆದರು.

ಬಿಜೆಪಿಯ 17, ಕಾಂಗ್ರೆಸ್ಸಿನ 9, ಪಕ್ಷೇತರ 4 ಹಾಗೂ ಜೆಡಿಎಸ್ ನ ಒಬ್ಬ ಸದಸ್ಯರಿದ್ದಾರೆ. ಚುನಾವಣಾಧಿಕಾರಿಯಾಗಿ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಶಿರಸಿ ನಗರಸಭೆ ಅಧಿಕಾರ ಪಡೆದಿತ್ತು.

ಕೇಸರಿ ಪೇಟಾದಲ್ಲಿ ಸದಸ್ಯರು: ನಗರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿತ್ತು. ಹೀಗಾಗಿ ಎಲ್ಲ ಸದಸ್ಯರು ಸಾಂಪ್ರದಾಯಿಕ ಕೇಸರಿ ಪೇಟಾ ತೊಟ್ಟು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು