ಬಂದೂಕು ತರಬೇತಿ: ಸಹೋದರಿಯರಿಗೆ ಬಹುಮಾನ

7
ರೋವರ್ಸ್‌, ರೇಂಜರ್ಸ್‌ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಆಯೋಜನೆ

ಬಂದೂಕು ತರಬೇತಿ: ಸಹೋದರಿಯರಿಗೆ ಬಹುಮಾನ

Published:
Updated:
Prajavani

ಕಾರವಾರ: ಇದೇ ಮೊದಲ ಬಾರಿಗೆ ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬಂದೂಕು ತರಬೇತಿಯಲ್ಲಿ ಸಹೋದರಿಯರಿಬ್ಬರು ಪ್ರಥಮ ಬಹುಮಾನ ಹಂಚಿಕೊಂಡಿದ್ದಾರೆ. ಹೊನ್ನಾವರ ಪ್ರಥಮ ದರ್ಜೆ ಕಾಲೇಜಿನ ಶಿಲ್ಪಾ ಎಸ್ ನಾಯ್ಕ ಹಾಗೂ ಸುಧಾ ಎಸ್ ನಾಯ್ಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ನಗರದಲ್ಲಿ ಫೆ.8ರಿಂದ 12ರವರೆಗೆ ನಾಗರಿಕ ಬಂದೂಕು ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಇದರ ಕೊನೆಯ ದಿನವಾದ ಮಂಗಳವಾರ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು. 

ಕುಮಟಾದ ಮುಕ್ತದಳದ ಸುನೀಲ ನಾಯ್ಕ ದ್ವಿತೀಯ ಬಹುಮಾನ ಗೆದ್ದರು. ಕುಮಟಾದ ಜಿಎಫ್ಜಿಸಿಯ ವಿದ್ಯಾರ್ಥಿ ಮಹೇಶ ‘ಉತ್ತಮ ನಾಯಕ’, ಸಮವಸ್ತ್ರ ವಿಭಾಗದಲ್ಲಿ ಹೊನ್ನಾವರ ಎಸ್‌ಡಿಎಂ ಕಾಲೇಜಿನ ಅತುಲ್ (ಪ್ರಥಮ), ಕುಮಟಾದ ಎ.ವಿ.ಬಾಳಿಗಾ ಕಾಲೇಜಿನವರಾದ ವಿನಾಯಕ ಭಟ್ (ದ್ವಿತೀಯ), ಕಾರ್ತಿಕ ಮಹಾಲೆ (ತೃತೀಯ) ಸ್ಥಾನ ಪಡೆದುಕೊಂಡರು. ಅದೇ ಕಾಲೇಜಿನ ವಿಶಾಲ ಖಾರ್ವಿ ‘ಬೆಸ್ಟ್ ಕಿಟ್ ಇನ್‌ಸ್ಪೆಕ್ಟರ್’ (ಪ್ರಥಮ), ಕುಮಟಾದ ಜಿಎಫ್‌ಜಿಸಿಯ ಕಮಲಾಕ್ಷಿ ಎನ್.ಮರಾಠೆ (ದ್ವಿತೀಯ) ಸ್ಥಾನ ಗೆದ್ದರು.

‘ಕ್ಯಾಂಪ್‌ ಫೈರ್’ ವಿಭಾಗದಲ್ಲಿ ಹೊನ್ನಾವರದ ಸರ್ಕಾರಿ ‍ಪ್ರಥಮ ದರ್ಜೆ ಕಾಲೇಜು ಪ್ರಥಮ ಹಾಗೂ ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ ಪಡೆದವು. 

ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಡಿ.ಫರ್ನಾಂಡಿಸ್, ‘ವಿದ್ಯಾರ್ಥಿಗಳಿಗೆ ಪಾಯಿಂಟ್ 22 ಮತ್ತು ಎಸ್‌ಎಲ್‌ಆರ್‌ ಬಂದೂಕುಗಳ ಚಲಾವಣೆಯ ತರಬೇತಿ ನೀಡಲಾಗಿದೆ. ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದು, 46 ವಿದ್ಯಾರ್ಥಿಗಳು ಬಂದೂಕು ಚಾಲನೆಯ ಪರವಾನಗಿ ಹೊಂದಲು ಅರ್ಹರಾಗಿದ್ದಾರೆ. ಇಬ್ಬರು 18 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದು, ಮುಂದಿನ ದಿನಗಳಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ’ ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ಅತುಲ್ ಮತ್ತು ಸಂಗೀತಾ ಮೇಸ್ತಾ ಶಿಬಿರದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಜಿ.ನಾಯಕ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಅಧಿಕಾರಿ ಡಾ.ಜಿ.ಜಿ.ಸಭಾಹಿತ, ರಾಜ್ಯ ಸಹಾಯಕ ಸಂಘಟನಾಧಿಕಾರಿ ಕರಿಸಿದ್ದಪ್ಪ, ಸ್ಥಾನಿಕ ಆಯುಕ್ತ ಎಸ್.ಎಸ್.ಭಟ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ಸಚಿನ್ ಲಾರೆನ್ಸ್, ನಿತ್ಯಾನಂದ ಮಹೇಕರ್ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !