4

ರೈಲಿಗೆ ಸಿಲುಕಿ ಕಂಪ್ಯೂಟರ್ ಶಿಕ್ಷಕಿ ಆತ್ಮಹತ್ಯೆ

Published:
Updated:
ಮೃತ ಯುವತಿ ಶೋಭಾ ನಾಯ್ಕ

ಭಟ್ಕಳ: ರೈಲಿಗೆ ಸಿಲುಕಿ ಕಂಪ್ಯೂಟರ್ ಶಿಕ್ಷಕಿಯೊಬ್ಬರು ಮಂಗಳವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಶಿರಾಲಿ ಚಿತ್ರಾಪುರದ ನಿವಾಸಿ ಹಾಗೂ ಶಿರಾಲಿ ಕೋಟೆಬಾಗಿಲು ಸೇಂಟ್ ಥಾಮಸ್ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶೋಭಾ ಮಾದೇವ ನಾಯ್ಕ (24) ಮೃತರು. ಅವರು ಮಂಗಳವಾರ ರಾತ್ರಿ 8 ಗಂಟೆಯಿಂದ ನಾಪತ್ತೆಯಾಗಿದ್ದರು.

ತಡರಾತ್ರಿ 1 ಗಂಟೆ ಸುಮಾರಿಗೆ ದೆಹಲಿಯಿಂದ ಕೇರಳಕ್ಕೆ ತೆರಳುತ್ತಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಿಗ್ಗೆ ಮನೆಯ ಸಮೀಪವೇ ಇದ್ದ ರೈಲ್ವೆ ಹಳಿಯ ಮೇಲೆ ಛಿದ್ರಗೊಂಡಿದ್ದ ಮೃತದೇಹ ಪತ್ತೆಯಾಗಿದೆ.

ರೈಲಿನ ಚಾಲಕ ಶೋಭಾ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದುದನ್ನು ಕಂಡು ಶಬ್ದ ಮಾಡಿ ತಪ್ಪಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತ ಶೋಭಾರ ತಂದೆ ಸರಕು ಸಾಗಣೆಯ ರಿಕ್ಷಾ ಚಾಲಕರಾಗಿದ್ದು, ಒಬ್ಬ ಸಹೋದರ ಮತ್ತು ಮದುವೆಯಾದ ಇಬ್ಬರು ಸಹೋದರಿಯರು ಇದ್ದಾರೆ. ತಾಯಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !