ತೂಫಾನ್: ತೀರ ಪ್ರದೇಶದಲ್ಲಿ ಲಂಗರು ಹಾಕಿದ ದೋಣಿಗಳು

7

ತೂಫಾನ್: ತೀರ ಪ್ರದೇಶದಲ್ಲಿ ಲಂಗರು ಹಾಕಿದ ದೋಣಿಗಳು

Published:
Updated:
Deccan Herald

ಕಾರವಾರ: ದಕ್ಷಿಣ ಮಧ್ಯ ಸಮುದ್ರದಲ್ಲಿ ತೂಫಾನ್ ಉಂಟಾಗಿದ್ದು, ಮೀನುಗಾರಿಕೆಗೆ ತೆರಳಿದ್ದ 70ಕ್ಕೂ ಅಧಿಕ ದೋಣಿಗಳು ಇಲ್ಲಿನ ಬೈತಖೋಲ್ ಹಾಗೂ ಅಲಿಗದ್ದಾ ತೀರದ ಬಳಿ ಲಂಗರು ಹಾಕಿವೆ.

‘ಆಳ ಸಮುದ್ರದಲ್ಲಿ ತೂಫಾನ್ ಉಂಟಾಗಿದೆ. ಈ ಕಾರಣದಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಇಲ್ಲಿನ ಸುಮಾರು 50 ದೋಣಿಗಳು ವಾಪಾಸಾಗಿವೆ. ಜತೆಗೆ, ತಮಿಳುನಾಡು ಮೂಲದ ಸುಮಾರು 20 ದೋಣಿಗಳು ಕೂಡ ಹೊರ ಹೋಗಲಾಗದೆ ಅಲಿಗದ್ದಾ ತೀರದಲ್ಲಿ ಲಂಗರು ಹಾಕಿವೆ’ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ.ನಾಗರಾಜ ತಿಳಿಸಿದರು.

ಆ.10ರ ವರೆಗೆ ಎಚ್ಚರಿಕೆ:

‘ಕರ್ನಾಟಕದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡು ಪ್ರದೇಶ, ಕೇರಳ, ಗೋವಾ ರಾಜ್ಯದಲ್ಲಿ ಆ.10ರ ವರೆಗೆ ಭಾರಿ ಮಳೆಯಾಗಲಿದೆ. ಈ ವೇಳೆ ಪಶ್ಚಿಮ ಹಾಗೂ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಒತ್ತಡ ಹೆಚ್ಚಾಗಲಿವೆ. ಹೀಗಾಗಿ, ಈ ಪ್ರದೇಶಕ್ಕೆ ಮೀನುಗಾರರು ಮೀನುಗಾರಿಕೆಗೆ ತೆರಳುವುದು ಸೂಕ್ತವಲ್ಲ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ವೆಬ್‌ಸೈಟ್‌ನಲ್ಲಿ ಎಚ್ಚರಿಸಿದೆ.

ರಾಜ್ಯದ ಕರಾವಳಿ ತೀರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವವರಿಗೆ ಜೂ.1ರಿಂದ ಜು.31ರವರೆಗೆ ಎರಡು ತಿಂಗಳ ನಿಷೇಧ ಹೇರಲಾಗಿತ್ತು. ‘ಇದೀಗ ನಿಷೇಧ ತೆರವಾದರೂ ಮೀನುಗಾರಿಕೆ ನಡೆಸದಂತಾಗಿದೆ. ಆರಂಭದಲ್ಲೇ ಈ ರೀತಿಯಾದರೆ ಮೀನುಗಾರರ ಜೀವನ ದುಸ್ತರವಾಗಲಿದೆ’ ಎಂದು ಕೆಲವು ಮೀನುಗಾರರು ಹೇಳಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !