ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಅರಣ್ಯ: 296 ಪಕ್ಷಿ ಪ್ರಭೇದ ಪತ್ತೆ

Published 17 ಫೆಬ್ರುವರಿ 2024, 14:05 IST
Last Updated 17 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ಕಾರವಾರ: ಕೆನರಾ ಅರಣ್ಯ ವೃತ್ತ ವ್ಯಾಪ್ತಿಯಲ್ಲಿ ಪಕ್ಷಿಗಳ 296 ಪ್ರಭೇದಗಳು ಇರುವುದು ಪತ್ತೆಯಾಗಿವೆ. ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ 60 ಸ್ಥಳಗಳಲ್ಲಿ 60 ಪಕ್ಷಿ ತಜ್ಞರು ನಡೆಸಿದ ಪಕ್ಷಿಗಳ ಸಮೀಕ್ಷೆಯಲ್ಲಿ ಇದು ಗೊತ್ತಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪಕ್ಷಿಗಳ ಭಾವಚಿತ್ರ ಸಂಗ್ರಹಿಸಿ ಅದರ ಮೂಲಕ ಮಾಹಿತಿ ಕಲೆಹಾಕಿ, ಇ–ಬರ್ಡ್ ವೆಬ್‍ಸೈಟ್‍ನಲ್ಲಿ ಮಾಹಿತಿ ದಾಖಲಿಸಲಾಗಿದೆ. ಸಮೀಕ್ಷೆ ವರದಿಯನ್ನು ದಾಂಡೇಲಿಯಲ್ಲಿ ಶನಿವಾರ ಹಾರ್ನಬಿಲ್ ಹಬ್ಬದಲ್ಲಿ ಪ್ರಕಟಿಸಲಾಯಿತು.

‘296 ಪ್ರಭೇದಗಳ ಪಕ್ಷಿಗಳು ಇದೇ ಮೊದಲ ಸಲ ಪತ್ತೆಯಾಗಿವೆಯೇ ಅಥವಾ ವಲಸೆ ಬಂದಿವೆಯೇ ಎಂಬುದು ಗೊತ್ತಾಗಬೇಕಿದೆ. ಒಂದೆರಡು ದಿನಗಳಲ್ಲಿ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಕೆನರಾ ಅರಣ್ಯ ವೃತ್ತದ ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT