ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಅಭಿವೃದ್ಧಿಗೆ ಕ್ರಮ: ಶಾಸಕ ಶಿವರಾಮ ಹೆಬ್ಬಾರ

Published 5 ಫೆಬ್ರುವರಿ 2024, 14:05 IST
Last Updated 5 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ಯಲ್ಲಾಪುರ: ದನಗರಗೌಳಿ ಸಮುದಾಯದವರು ಎಂಥದೆ ಕಷ್ಟದ ಪರಿಸ್ಥಿತಿಯಲ್ಲಿಯೂ ಜಾನುವಾರುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪಶುಸಂಗೋಪನಾ ಇಲಾಖೆ ಭಾನುವಾರ ಆಯೋಜಿಸಿದ್ದ ಜಾನುವಾರು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೇವಿನ ಬೆಳೆ ಬೆಳೆಯಲು ಸಾಕಷ್ಟು ಬೀಜಗಳು ಉಚಿತವಾಗಿ ದೊರೆಯುತ್ತವೆ. ಅವುಗಳ ಪ್ರಯೋಜನವನ್ನು ಹೈನುಗಾರರು ಪಡೆಯಬೇಕು. ಮುಂದಿನ ದಿನಗಳಲ್ಲಿ ಎಲ್ಲ ಭಾಗದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ಜಾನುವಾರು ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಜಾಣುವಾರುಗಳು ಭಾಗವಹಿಸಿದ್ದವು. ನೋಂದಾಯಿತ ಎಲ್ಲಾ ಜಾನುವಾರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ಮಿಶ್ರತಳಿ ಆಕಳ ಸಾಕಾಣಿಕೆಯ ಸಾಧಕ-ಬಾಧಕಗಳ ಬಗೆಗೆ ವಿಚಾರಗೋಷ್ಠಿ ನಡೆಯಿತು. ಕಿರವತ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಗೀತಾ ಕೊಕ್ರೆ, ಉಪಾಧ್ಯಕ್ಷೆ ಹನುಮವ್ವ ಬಜಂತ್ರಿ, ಸದಸ್ಯರಾದ ಗಾಂಧಿ ಸೋಮಾಪುರಕರ, ರಸೂಲ್ ಸಾಬ್ ಮುಜಾವರ, ಲಕ್ಕುಬಾಯಿ ಪಟಕಾರೆ, ಡಾ.ಗೋವಿಂದ ಭಟ್, ಡಾ.ಆರ್‌.ಜಿ. ಹೆಗಡೆ ಇದ್ದರು. ಡಾ.ಸುಬ್ರಾಯ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT