ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳಿಯಾಳ | ಐಜೂರು ಘಟನೆ ಖಂಡಿಸಿ ಮುಖ್ಯಮಂತ್ರಿಗೆ ಮನವಿ

Published 22 ಫೆಬ್ರುವರಿ 2024, 14:23 IST
Last Updated 22 ಫೆಬ್ರುವರಿ 2024, 14:23 IST
ಅಕ್ಷರ ಗಾತ್ರ

ಹಳಿಯಾಳ: ರಾಮನಗರದ 40 ವಕೀಲರ ವಿರುದ್ಧ ಐಜೂರು ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಹಳಿಯಾಳ ವಕೀಲರ ಸಂಘದ ವಕೀಲರು ನ್ಯಾಯಾಲಯದ ಕಾರ್ಯ ಕಲಾಪದಿಂದ ದೂರ ಉಳಿದು ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗುರುವಾರ ಬೆಳಿಗ್ಗೆ ಸಂಘದ ಕಾರ್ಯಾಲಯದಲ್ಲಿ ಸಭೆ ನಡೆಸಿ, ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಗ್ರೇಡ್ 1 ತಹಶೀಲ್ದಾರ್ ಜಿ.ಕೆ ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು.

‘ವಕೀಲರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕು. ಪೊಲೀಸರಿಂದ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳನ್ನು ರಾಜ್ಯ ಸರ್ಕಾರ ತಡೆಯಬೇಕು. ವಕೀಲರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ವಕೀಲರಿಗೆ ಕಾನೂನು ರಕ್ಷಣೆ ನೀಡಬೇಕು’ ಎಂದು ಮನವಿ ಮೂಲಕ ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಸುಂದರ ಕಾನ್ಕಾತ್ರಿ, ಕಾರ್ಯದರ್ಶಿ ಮೇಘರಾಜ ಮೇತ್ರಿ, ಸದಸ್ಯರಾದ ಎ.ಎಫ್. ಕಿತ್ತೂರ, ರಾಧಾರಾಣಿ ಕೊಳಾಂಬೆ, ಯಲ್ಲಪ್ಪ ಸುರೋಜಿ, ಅನಿಲ ಢೇಪಿ, ಎ.ಎಂ ಪಾಟೀಲ, ಎಂ.ವಿ.ಅಷ್ಟೇಕರ, ಎಸ್.ವೈ.ಗುಪಿತ, ಸಂತೋಷ.ಎಚ್, ಸುರೇಖಾ ಗುನಗಾ, ಎಸ್.ಎಲ್.ಸೋಮಣ್ಣವರ, ಮಂಜುನಾಥ ಮಾದರ, ಸಂದೀಪ ಎಂ.ಪಿ, ಎಸ್.ಐ.ಗಡಾದ, ರವಿ ತೋರಣಕಟ್ಟಿ, ವಿ.ವಿ.ರೆಡ್ಡಿ, ಶ್ರೀನಿವಾಸ ಕೊಂಜಾಳಿ, ಸಿದ್ದಮ್ಮ ಸಾಹುಕಾರ, ಪದ್ಮಾವತಿ ಎನ್.ಎಂ, ಪ್ರವೀಣ ತಳವಾರ, ಸುಭಾಷ ವಡ್ಡರ, ಸಂತೋಷ ಮಹಾಲೆ, ಎನ್.ಎ.ಚಲವಾದಿ ಇತರರು ಇದ್ದರು.

ರಾಮನಗರದ ಐಜೂರು ಠಾಣೆ ಪೊಲೀಸರು ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ವಕೀಲರಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿ ಗ್ರೇಡ್ 1 ತಹಶೀಲ್ದಾರ್ ಜಿ.ಕೆ.ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು
ರಾಮನಗರದ ಐಜೂರು ಠಾಣೆ ಪೊಲೀಸರು ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ವಕೀಲರಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿ ಗ್ರೇಡ್ 1 ತಹಶೀಲ್ದಾರ್ ಜಿ.ಕೆ.ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT