ಜಾಲರಿ ಅಳವಡಿಕೆ ಕಡ್ಡಾಯವಾಗಲಿ
ಪಟ್ಟಣದಲ್ಲಿರುವ ಹೋಟೆಲ್ ಲಾಡ್ಜ್ ಹಾಗೂ ಅಪಾರ್ಟಮೆಂಟ್‌ಗಳ ಒಳಚರಂಡಿ ಸಂಪರ್ಕ ನೀಡುವಾಗ ಕಡ್ಡಾಯವಾಗಿ ಅವರ ಕಿರು ಚೇಂಬರಿಗೆ ಜಾಲರಿ ಹಾಕಿಸುವ ನಿಯಮ ಜಾರಿ ಮಾಡಿದರೆ ಮ್ಯಾನ್‌ಹೋಲ್ ಸೋರುವಿಕೆ ಹಾಗೂ ತ್ಯಾಜ್ಯ ಸಿಲುಕಿಕೊಳ್ಳುವ ಸಮಸ್ಯೆಗೆ ಪರಿಹಾರ ದೊರೆಯಬಹುದು. ಮನೆಗಳಿಗೂ ಈ ನಿಯಮಗಳನ್ನು ವಿಸ್ತರಿಸಿದರೆ ಇನ್ನೂ ಉತ್ತಮ’ ಎಂದು ಸಲಹೆ ನೀಡುತ್ತಾರೆ ಸ್ಥಳೀಯರಾದ ಅಬ್ದುಲ್ ಘನಿ.