ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ತುಕ್ಕು ಹಿಡಿಯುತ್ತಿದೆ ಪುರಸಭೆಯ ಜೆಸಿಬಿ

ಖರೀದಿಸಿದ ಎರಡೇ ವರ್ಷಕ್ಕೆ ಬಳಕೆಗೆ ಬಾರದ ಸ್ಥಿತಿ ತಲುಪಿದ ಯಂತ್ರ
Published 2 ಏಪ್ರಿಲ್ 2024, 4:20 IST
Last Updated 2 ಏಪ್ರಿಲ್ 2024, 4:20 IST
ಅಕ್ಷರ ಗಾತ್ರ

ಭಟ್ಕಳ: ಪುರಸಭೆಯಿಂದ ಎರಡು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಹೊಸ ಜೆಸಿಬಿ ಯಂತ್ರ ಕೆಟ್ಟು ನಿಂತಿದೆ. ತಿಂಗಳು ಕಳೆದರೂ ಅದರ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದ ಯಂತ್ರವು ತುಕ್ಕು ಹಿಡಿಯುವ ಹಂತದಲ್ಲಿದೆ ಎಂಬುದು ಪುರಸಭೆ ಸದಸ್ಯರ ಆರೋಪ.

ಪಟ್ಟಣದ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆಯುವುದು, ಘನತ್ಯಾಜ್ಯ ಘಟಕದಲ್ಲಿ ಕಸ ತುಂಬುವುದು, ಅಗತ್ಯ ಸಂದರ್ಭದಲ್ಲಿ ಮರ ತೆರವು, ಕಂಬ ತೆರವು ಸೇರಿದಂತೆ ತುರ್ತು ಕೆಲಸಕ್ಕಾಗಿ ಜೆಸಿಬಿ ಯಂತ್ರವನ್ನು ಬಳಸಿಕೊಳ್ಳಲಾಗುತ್ತದೆ. ಈ ಹಿಂದೆ ಪುರಸಭೆಯಲ್ಲಿ ಇದ್ದ ಜೆಸಿಬಿ ಯಂತ್ರ ಗುಜರಿಯಾದ ಕಾರಣ ಎರಡು ವರ್ಷಗಳ ಹಿಂದೆ ಕೆಸ್ ಕಂಪನಿಯ ಹೊಸ ಜೆಸಿಬಿ ಯಂತ್ರ ಖರೀದಿ ಮಾಡಲಾಗಿತ್ತು.

ಖರೀದಿಯ ಆರಂಭದ ದಿನಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರ ಕೆಲವು ತಿಂಗಳ ಹಿಂದೆ ಕೆಟ್ಟು ನಿಂತಿದ್ದು ಘನತ್ಯಾಜ್ಯ ಘಟಕದಲ್ಲಿ ಇರಿಸಲಾಗಿದೆ. ಇದರಿಂದಾಗಿ ಪುರಸಭೆಯವರು ಜೆಸಿಬಿಯಿಂದ ಆಗಬೇಕಾದ ಕೆಲಸಗಳನ್ನು ಬಾಡಿಗೆ ಜೆಸಿಬಿ ತರಿಸಿ ಮಾಡಿಸಿಕೊಳ್ಳುತ್ತಿದ್ದಾರೆ.

‘ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಗಾಲದಲ್ಲಿ ಅತಿವೃಷ್ಟಿಯಿಂದ ನೀರು ತುಂಬಿಕೊಂಡರೆ ಅಲ್ಲಲ್ಲಿ ತೆರವು ಮಾಡಲು ಜೆಸಿಬಿ ಅಗತ್ಯ ಇದೆ. ಹೊಸದಾಗಿ ಖರೀದಿ ಮಾಡಿರುವ ಜೆಸಿಬಿ ಪದೇಪದೆ ಕೈಕೊಡುತ್ತಿದೆ. ಪಟ್ಟಣದ ಜನರ ತೆರಿಗೆ ಹಣದಿಂದ ಲಕ್ಷಾಂತರ ರೂಪಾಯಿ ನೀಡಿ ಖರೀದಿಸಿದ ಜೆಸಿಬಿಯನ್ನು ನಿರ್ವಹಣೆ ಮಾಡಲಾಗದೇ ತುಕ್ಕು ಹಿಡಿಯಲು ಬಿಟ್ಟರೆ ಮುಂದೆ ಕಥೆ ಏನು’ ಎಂದು ಪ್ರಶ್ನಿಸುತ್ತಾರೆ ಪುರಸಭೆ ಸದಸ್ಯರಾದ ರಾಘವೇಂದ್ರ ಶೇಟ್.

ಜೆಸಿಬಿ ಯಂತ್ರದ ದುರಸ್ತಿ ಬಗ್ಗೆ ಎಂಜಿನಿಯರಿಂಗ್‌ ವಿಭಾಗದಿಂದ ಅಂದಾಜು ಪ್ರತಿ ತರಿಸಿಕೊಂಡು ಆಡಳಿತಾಧಿಕಾರಿಯ ಒಪ್ಪಿಗೆ ಪಡೆದು ದುರಸ್ತಿ ಮಾಡಲು ಕ್ರಮ ವಹಿಸಲಾಗುವುದು

-ಶಿವಾನಂದ ಆಲೂರು ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT