ಯಲ್ಲಾಪುರ: ʻಸ್ವಾತಂತ್ರೋತ್ತರ ಭಾರತದಲ್ಲಿ ಗಾಂಧಿ- ಕಲ್ಪನೆ ಮತ್ತು ವಾಸ್ತವ ಎಂಬ ವಿಷಯದ ಮೇಲೆ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಜನವರಿ 30ರಂದು ವಿಚಾರ ಸಂಕಿರಣ, ಸಂವಾದ ಮತ್ತು ರಂಗ ಪ್ರದರ್ಶನ ಆಯೋಜಿಸಲಾಗಿದೆʼ ಎಂದು ರಂಗ ಸಮೂಹದ ಅಧ್ಯಕ್ಷ ರಾಮಕೃಷ್ಣ ದುಂಡಿ ತಿಳಿಸಿದರು.

ಅವರು ಬುಧವಾರ ಪಟ್ಟಣದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

ʻಲೇಖಕ ಅರವಿಂದ ಚೊಕ್ಕಾಡಿ ವಿಷಯ ಮಂಡಿಸುವರು. ಸಾಹಿತಿ ಶ್ರೀಧರ ಬಳಗಾರ ಪ್ರಾಸ್ತಾವಿಕವಾಗಿ ಮಾತನಾಡುವರು. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸುವರು. ಉಪನ್ಯಾಸದ ನಂತರ ಮುಕ್ತ ಚರ್ಚೆ ಇರಲಿದೆ. ರಂಗಾಯಣ ಶಿವಮೊಗ್ಗ ಇವರು ಚಿದಂಬರ್ ರಾವ್ ಜಂಬೆ ಅವರ ನಿರ್ದೇಶನ ಮತ್ತು ಓಂಕಾರ ಮೇಗಳಾಪುರ ಅವರ ಸಹ ನಿರ್ದೇಶನದಲ್ಲಿ ʻನಮ್ಮೊಳಗೊಬ್ಬ ಗಾಂಧಿʼ ನಾಟಕ ಪ್ರದರ್ಶಿಸಲಿದ್ದಾರೆ.

ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ, ರಂಗ ಸಮೂಹ ಮಂಚಿಕೇರಿ ಹಾಗೂ ಸೇವಾ ಸಹಕಾರಿ ಸಂಘ ಹಾಸಣಗಿ ಇವರು ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

ಪ್ರಮುಖರಾದ ಎಂ.ಕೆ. ಭಟ್ಟ ಯಡಳ್ಳಿ, ಆರ್.ಎಲ್ ಭಟ್ಟ, ನವೀನ್ ಹೆಗಡೆ, ರಾಮಣ್ಣ ಕಬ್ಬಿನಗದ್ದೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.