ದಾಂಡೇಲಿ: ತಾಲ್ಲೂಕಿನ ಅಂಬಿಕಾ ನಗರದ ಗ್ರಾಮದಿಂದ ಪವರ್ ಹೌಸ್ ಸಂಪರ್ಕಿಸುವ ರಸ್ತೆಯ ಪಕ್ಕದ ಕಾಂಪೌಂಡ್ ಮೇಲೆ ಚಿರತೆ ಮತ್ತು ಮರಿ ಕಾಣಿಸಿಕೊಂಡ ಅಪರೂಪದ ದೃಶ್ಯ ಶನಿವಾರ ಪ್ರಯಾಣಿಕರ ಗಮನ ಸೆಳೆದಿದೆ.

ಕಟ್ಟೆಯ ಮೇಲೆ ಕೆಲ ಹೊತ್ತು ವಿಶ್ರಾಂತಿಗಾಗಿ ಚಿರತೆಗಳು ಕುಳಿತಿರಬಹುದು ಎಂದು ಜನರು ಅಂದಾಜಿಸಿದರು. ಈ ಮಾರ್ಗವಾಗಿ ಸಾಗುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ಗಳಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

ಸುತ್ತಮುತ್ತಲಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂಚಾರ ಸಾಮಾನ್ಯವಾಗಿದ್ದರೂ, ರಸ್ತೆಯ ಪಕ್ಕದಲ್ಲಿ ಕಂಡು ಬಂದ ಈ ದೃಶ್ಯ ಅಪರೂಪ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಅಂಬಿಕಾ ನಗರ-ಪವರ್ ಹೌಸ್ ಮಾರ್ಗದಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು. ಕಾಡು ಪ್ರಾಣಿಗಳಿಗೆ ತೊಂದರೆ ಉಂಟು ಮಾಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.