ಭಾರೀ ಗಾತ್ರದ ನಾಯಿ ಸಾಕುತ್ತಿರುವ ಇವರ ಮನೆಯಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಿವೆ. ಹಿಂದಿನ ವರ್ಷವೂ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು. ಈ ವರ್ಷ ಮೇ 22ರ ರಾತ್ರಿಯೂ ಚಿರತೆ ಬಂದು ನಾಯಿಯನ್ನು ಹೊತ್ತೊಯ್ದಿತ್ತು. ಇದೀಗ ಪುನಃ ಶುಕ್ರವಾರ ಬೆಳಗಿನ ಜಾವ ಚಿರತೆ ನಾಯಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಭಾಗದ ಜನತೆ ಚಿರತೆ ದಾಳಿಯಿಂದಾಗಿ ಭಯಭೀತರಾಗಿದ್ದು ಅರಣ್ಯ ಇಲಾಖೆ ಈ ಕುರಿತು ನಿಗಾ ವಹಿಸುವಂತೆ ಕೋರಿದ್ದಾರೆ.