ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ದಶಮಾನೋತ್ಸವ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Published 12 ಜುಲೈ 2023, 12:31 IST
Last Updated 12 ಜುಲೈ 2023, 12:31 IST
ಅಕ್ಷರ ಗಾತ್ರ

ದಾಂಡೇಲಿ:ರಕ್ತವನ್ನು ಕೃತಕವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ಅದನ್ನು ಮನುಷ್ಯರಿಂದಲೇ ದಾನವಾಗಿಯೇ ಪಡೆಯಬೇಕು.ರಕ್ತದಾನವು ಮಹಾದಾನವಾಗಿದೆ. ರಕ್ತದಾನ ಮಾಡಿದವರಿಂದ ಜೀವ ಉಳಿಸುವ ಸಾರ್ಥಕತೆಯನ್ನು ಪಡೆಯುತ್ತಾರೆ.ಯುವತಿಯರು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಬೇಕೆಂದು ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ಆಡಳಿತಾಧಿಕಾರಿ ಪ್ರಕಾಶ ಪ್ರಭು ಅಭಿಪ್ರಾಯಪಟ್ಟರು.

ಅಂಬೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ, ಕೆನೆರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟಿ ಹಳಿಯಾಳ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ತಿಥಿಗಳಾಗಿ ತಾಲೂಕಾ ಆರೋಗ್ಯಾಧಿಕಾರಿಗಳು ಡಾ. ಅನಿಲಕುಮಾರ, ಸಾರ್ವಜನಿಕ ಆಸ್ಪತ್ರೆ ಹಿರಿಯ ವೈದ್ಯರಾದ ರಾಜೇಶಪ್ರಸಾದ, ಕರ್ನಾಟಕ ಕಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ರಕ್ತ ಭಂಡಾರ ಕೇಂದ್ರ ವೈದ್ಯಾಧಿಕಾರಿ ಉಮೇಶ ಹಳ್ಳಿಕೇರಿ ಭಾಗವಹಿಸಿ ರಕ್ತದಾನ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಡಿ. ಒಕ್ಕುಂದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕರಾದ ಡಾ. ಮಂಜುನಾಥ ಜಿ. ಚಲವಾದಿ, ಡಾ ನಾಸೀರಅಹ್ಮದ ಜಂಗೂಬಾಯಿ,ತಸ್ಲೀಮಾ ಎಂ. ಜೋರುಮ್ ಮತ್ತು ವಿನಾಯಕ ಚವ್ಹಾಣ ಹಾಗೂ ಗೌರವ ಉಪಸ್ಥಿತಿಯಲ್ಲಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ ಬಿ.ಎನ್.ಅಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT