ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ | ಟಿಎಂಎಸ್: ₹4.34 ಕೋಟಿ ನಿವ್ವಳ ಲಾಭ

Published : 18 ಆಗಸ್ಟ್ 2024, 15:33 IST
Last Updated : 18 ಆಗಸ್ಟ್ 2024, 15:33 IST
ಫಾಲೋ ಮಾಡಿ
Comments

ಸಿದ್ದಾಪುರ: ‘ಅಡಿಕೆ ಬೆಳೆಗಾರರ ಹೆಮ್ಮೆಯ ನಮ್ಮ ಸಂಘವು 77 ಸಾರ್ಥಕ ವಸಂತಗಳನ್ನು ಪೂರೈಸಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ₹4.34 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15ರಷ್ಟು ಲಾಭಾಂಶ ವಿತರಿಸಲು ಆಡಳಿತ ಮಂಡಳಿ ನಿರ್ಣಯಿಸಿದೆ’ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದರು.

ಸಂಸ್ಥೆಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ನಮ್ಮ ಸಂಘ 2023-24ನೇ ಸಾಲಿನಲ್ಲಿ 56,554 ಕ್ವಿಂಟಲ್ ಅಡಿಕೆ, 389 ಕ್ವಿಂಟಲ್ ಕಾಳುಮೆಣಸು ಹಾಗೂ 2,792 ಕ್ವಿಂಟಲ್ ಹಸಿ ಅಡಿಕೆ ವಿಕ್ರಿ ಮಾಡಿದ್ದು, ₹ 233.05ಕೋಟಿ ವಹಿವಾಟು ಆಗಿದೆ. ದುಡಿಯುವ ಬಂಡವಾಳ ₹218.61ಕೋಟಿಗೂ ಅಧಿಕವಾಗಿದ್ದು, ಸಂಚಿತ ನಿಧಿಗಳ ಮೊತ್ತ ₹60.79 ಕೋಟಿ ಇದೆ ಹಾಗೂ ₹108.29ಕೋಟಿ ಠೇವುಗಳನ್ನು ಸಂಗ್ರಹಿಸಲಾಗಿದೆ’ ಎಂದು ತಿಳಿಸಿದರು.

‘ಆ.24ರಂದು ಮಧ್ಯಾಹ್ನ 3 ಗಂಟೆಗೆ ಸಂಘದ ವ್ಯಾಪಾರಾಂಗಣದಲ್ಲಿ ವಾರ್ಷಿಕ ಸಭೆ ಕರೆಯಲಾಗಿದೆ. ಆ.20ರಂದು ಮಧ್ಯಾಹ್ನ 3 ಗಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ ಆ.22ರಂದು ಸಂಜೆ 5 ಗಂಟೆಗೆ ಕಾನಸೂರ ಶಾಖೆ ಕಾರ್ಯಾಲಯದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಆಯ್ದ ಹಿರಿಯ ಸದಸ್ಯರನ್ನು ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು’ ಎಂದರು.

‘ಆ.24ರ ಸಾಮಾನ್ಯ ಸಭೆಯ ನಂತರ ಯಕ್ಷಸಿರಿ ಬೆಂಗಳೂರು ಇವರಿಂದ ‘ಕೃಷ್ಣಾರ್ಜುನ ಕಾಳಗ’ ಪೌರಾಣಿಕ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆ, ಸಂಸ್ಥೆಯ ನಿರ್ದೇಶಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT