ಕಾರವಾರ: ಶಿರಸಿ ನಗರದಲ್ಲಿ ಮಾರ್ಚ್ 4ರ ವರೆಗೆ ಮಾರಿಕಾಂಬಾ ಜಾತ್ರೆ ಜರುಗಲಿರುವುದರಿಂದ ಜನರ ಸುರಕ್ಷತೆ, ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.

‘ಶಿರಸಿ ನಗರದ ಐದು ರಸ್ತೆ ವೃತ್ತದಿಂದ, ಶಿವಾಜಿ ಚೌಕ, ಬಿಡ್ಕಿ ಬೈಲ್ ವೃತ್ತ, ಕಾಮತ ಹೋಟೆಲ್ ಕ್ರಾಸ್, ಮಂಗಳೂರ ಹೊಟೆಲ್ ಕ್ರಾಸ್ದಿಂದ ಕೋಟೆಕೆರೆ ವೃತ್ತದವರೆಗೆ ವಾಹನ ಸಂಚಾರ ನಿಷೇಧಿಸಿದೆ. ಪರ್ಯಾಯ ಮಾರ್ಗವಾಗಿ ಐದು ರಸ್ತೆ ಯಿಂದ ಝೂ ವೃತ್ತ -ರಾಘವೇಂದ್ರ ವೃತ್ತ, ಅಶ್ವಿನಿ ವೃತ್ತ, ಮಹಾಸತಿ ವೃತ್ತದಿಂದ ಯಲ್ಲಾಪುರ ಕಡೆಯಿಂದ, ಹುಬ್ಬಳ್ಳಿ ಕಡೆಗೆ ಹೋಗುವಂತೆ ಹಾಗೂ ಬನವಾಸಿ ಕಡೆಗೆ ಹೋಗುವ ವಾಹನಗಳಿಗೆ ಮಹಾಸತಿ ವೃತ್ತದಿಂದ ಎ.ಪಿ.ಎಂ.ಸಿ. ಮಾರ್ಗವಾಗಿ ಕೋಟೆಕೇರೆ ವೃತ್ತದಿಂದ ಸಿರ್ಸಿಕರ ಪ್ಲಾಟ್ ಮಾರ್ಗವಾಗಿ ಬನವಾಸಿ ರಸ್ತೆ ಮುಖಾಂತರ ಸಂಚರಬಹುದು’ ಎಂದು ತಿಳಿಸಿದ್ದಾರೆ.

‘ರಾಮನಬೈಲ್ ಕ್ರಾಸ್ನಿಂದ ಮಾರಿಕಾಂಬಾ ದೇವಸ್ಥಾನ ಮಾರ್ಗವಾಗಿ ಕಾಮತ ಹೊಟೆಲ್ ಕ್ರಾಸ್ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ. ಬನವಾಸಿ ಮಾರ್ಗವಾಗಿ ಸಂಚರಿಸುವ ವಾಹನಗಳು ಸಿರ್ಸಿಕರ ಪ್ಲಾಟ್-ಕರಿಗುಂಡಿ ರಸ್ತೆ, ಕೋಟೆಕೇರೆ ಎ.ಪಿ.ಎಂ.ಸಿ. ವೇ ಬ್ರಿಜ್ನಿಂದ ಹುಬ್ಬಳ್ಳಿ ಹಾವೇರಿ, ಮತ್ತು ಎ.ಪಿ.ಎಂ.ಸಿ. ಮಾರ್ಗವಾಗಿ ಯಲ್ಲಾಪುರ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸಬಹುದು. ಅಗಸೆಬಾಗಿಲು ಕ್ರಾಸ್ನಿಂದ ರಾಯರಪೇಟೆ, ವೀರಭದ್ರಗಲ್ಲಿ ಕರ್ಜಗಿ, ಶಂಕರ ಹೊಂಡ ಮಾರ್ಗವನ್ನು ಏಕಮುಖ ಸಂಚಾರಕ್ಕೆ ಮೀಸಲುಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.