ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ: ಹಳಿಯಾಳ ಬಂದ್‌ಗೆ ಕರೆ

Last Updated 17 ಮೇ 2017, 9:05 IST
ಅಕ್ಷರ ಗಾತ್ರ

ಹಳಿಯಾಳ: ಅಂಬೇಡ್ಕರ ಭವನ ನಿರ್ಮಾಣ ಮಾಡಲು ದಲಿತರ ಕಾಲೊನಿಯ ಪಕ್ಕದಲ್ಲಿಯೇ ನಿವೇಶನ ನೀಡಬೇಕು. ಇದಕ್ಕಾಗಿ ಮೇ 17 ರಂದು  ದಲಿತ ಸಂಘಟನೆಯ ಒಕ್ಕೂಟದಿಂದ ಹಳಿಯಾಳ ಬಂದ್ ಗೆ ಕರೆ ನೀಡಲಾಗಿದೆ.

‘ಬಂದ್‌ಗೆ ಎಲ್ಲ ವರ್ಗದವರು ದಲಿತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಸಿ ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು, ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಮನವಿ ಮಾಡಿಕೊಂಡಿದ್ದಾರೆ.

ಭೇಟಿ:  ಅಂಬೇಡ್ಕರ ಭವನ ನಿರ್ಮಾಣಕ್ಕೆ ಆಗ್ರಹಿಸಿ ದಲಿತ ಸಂಘಟನೆಯ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ, ಫ್ರಾನ್ಸ್‌ ದೇಶದ ಸೋಫಿಯಾ ಹಾಗೂ ಲಂಡನ್‌ನ ಹಾಜಾಸಲಿಫು ದಗರ್ಜಿ ದಲಿತರ ಹಾಗೂ ಸಿದ್ದಿ ಸಮುದಾಯದ ಕುರಿತು ಮಾಹಿತಿ ಪಡೆದರು.

ಅಂಬೇಡ್ಕರ ಭವನ ನಿರ್ಮಾಣ ಮಾಡಲು ದಲಿತರ ಕಾಲೋನಿಯ ಪಕ್ಕದಲ್ಲಿಯೇ ನಿವೇಶನ ನೀಡಬೇಕೆಂದು ಆಗ್ರಹಿಸಿ 6 ದಿನದಿಂದ ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯದ ಹತ್ತಿರ ದಲಿತ ಸಂಘಟನೆಯ ಒಕ್ಕೂಟದ ವತಿಯಿಂದ  ಧರಣಿ ನಡೆಸಲಾಗುತ್ತಿದೆ.

ಇಲ್ಲಿಗೆ ಭೇಟಿ ನೀಡಿದ್ದ ಅವರು, ಸಮುದಾಯದಲ್ಲಿರುವ ಪರಂಪರೆ, ಸಂಪ್ರದಾಯ, ಆಚರಣೆ, ವಿಚಾರ ಹಾಗೂ ಸಮಸ್ಯೆ, ಮಾರ್ಗೋಪಾಯಗಳ ಕುರಿತು ದಲಿತ ಮುಖಂಡರೊಂದಿಗೆ ಚರ್ಚಿಸಿದರು.

ಹಾಜಾಸಲಿಫು ದಗರ್ಜಿ ಮಾತನಾಡಿ, ‘ತಾವು ಗ್ಲೋಬೋ ಆಫ್ರಿಕಾ ಕಾಂಗ್ರೆಸ್ ಯುನೈಟೆಡ್ ಕಿಂಗಡಮ್‌ನ ಸಾಲಿಪುದಗಾರ್ಜಿ ಫೌಂಡೇಷನ್‌ನಿಂದ  ಹಳಿಯಾಳ ಹಾಗೂ ಜಿಲ್ಲೆಯ ಮತ್ತಿತರ ಭಾಗದ ಸಿದ್ದಿ ಸಮುದಾಯದವರ ಅಧ್ಯಯನ ನಡೆಸುತ್ತಿದ್ದೇನೆ.

ಭಾರತ ದೇಶದಲ್ಲಿ ಸಿದ್ದಿ ಸಮುದಾಯದವರಿಗೆ ಯಾವ ರೀತಿಯ ನೆಲಗಟ್ಟು, ಬದುಕು ನಿರ್ವಹಣೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಕ್ಕು ಎಂಬುವುದರ ಬಗ್ಗೆ ಅಧ್ಯಯನ ನಡೆಸಿ ತಮ್ಮ ದೇಶದಲ್ಲಿರುವ ಸಿದ್ದಿ ಬುಡಕಟ್ಟು ಹಾಗೂ ದಲಿತ ಸಮುದಾಯದವರ  ಹಕ್ಕುಗಳ ಕುರಿತು ಬುಡಕಟ್ಟು ಜನಾಂಗದವರ ಜೊತೆ ವಿನಿಮಯಮಾಡಿಕೊಳ್ಳಲಿದ್ದೇನೆ’ ಎಂದರು.

ಸೋಫಿಯಾ ಮಾತನಾಡಿ, ‘ಸಿದ್ದಿ ಸಮುದಾಯದವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಾಗೂ ಮಾನವ ಸಂಪನ್ಮೂಲಗಳ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ಈಗಾಗಲೇ ಹಳಿಯಾಳ ಹಾಗೂ ಯಲ್ಲಾಪೂರ ತಾಲ್ಲೂಕಿನ ಸಿದ್ದಿ ಸಮುದಾಯದವರೊಂದಿಗೆ ವಾಸಿಸಿ ಅಧ್ಯಯನ ನಡೆಸಿರುತ್ತೇನೆ. ಈ ಬಗ್ಗೆ ಪಿಎಚ್ ಡಿ ಸಹ ವ್ಯಾಸಾಂಗ ಮಾಡುತ್ತಿದ್ದೇನೆ’ ಎಂದರು.

ಮ್ಯಾನವೆಲ್ ಲೂಯಿಸ್, ದಲಿತ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಈರಣ್ಣಾ ವಡ್ಡರ, ಹಣಮಂತ ತಳವಾರ, ಮಂಜುನಾಥ ಚಲವಾದಿ, ಮತ್ತಯ್ಯಾ ಮಾದರ, ಗಿರೀಶ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT