ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾರ್ಥವಿಲ್ಲದ ಬದುಕು ಸುಖ, ಸಮೃದ್ಧ’

Last Updated 8 ಫೆಬ್ರುವರಿ 2017, 9:24 IST
ಅಕ್ಷರ ಗಾತ್ರ

ಅಂಕೋಲಾ: ಸ್ವಾರ್ಥವಿಲ್ಲದೆ ನಮ್ಮ ಸೇವೆಯನ್ನು ಸರಿಯಾಗಿ ಮಾಡಿದರೆ ವ್ಯಕ್ತಿ 100 ವರ್ಷಗಳವರೆಗೂ ಬದುಕಬಹುದು. ಆದರೆ ಸ್ವಾರ್ಥದಿಂದಾಗಿ ಮನುಷ್ಯ ತನ್ನ ಆರೋಗ್ಯವನ್ನು ಹದಗೆಡಿಸಿಕೊಳ್ಳುವುದರ ಜೊತೆಗೆ ಸಂಸ್ಕೃತಿಯನ್ನು ಕೊಲ್ಲುತ್ತಿದ್ದಾನೆ' ಎಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸುಕ್ರಿ ಗೌಡ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜಾನಪದ ವಿದ್ವಾಂಸ ಡಾ. ಕಾಳೇಗೌಡ ನಾಗವಾರ ಮಾತನಾಡಿ, 'ಬುಡಕಟ್ಟು ಸಮಾಜವಾದ ಹಾಲಕ್ಕಿ ಸಮಾಜದಲ್ಲಿ ಸಾಕಷ್ಟು ಕಲೆ ಮತ್ತು ಸಂಪ್ರದಾಯಗಳಿವೆ. ಇದಕ್ಕೆ ಸುಕ್ರಜ್ಜಿಯವರೇ ಉದಾಹರಣೆ. ಅವರ ಕುರಿತು ಪಿ.ಎಚ್‌ಡಿ ಮಾಡುವಷ್ಟು ಜ್ಞಾನ ಅವಳಲ್ಲಿದೆ’ ಎಂದರು.

ಹತ್ತಾರು ವರ್ಷಗಳಿಂದ ಜನರ ಸೇವೆ ಜೊತೆಗೆ ಕಲಾ ಸಾಧನೆ ಮಾಡುತ್ತಿರುವ ಸುಕ್ರಜ್ಜಿ ಎಲೆ ಮರೆಯ ಕಾಯಿಯಂತೆ ದುಡಿದಿದ್ದಾರೆ. ನೊಂದ ಜೀವಗಳಿಗೆ ಸ್ಫೂರ್ತಿಯಾಗಿ, ಬದುಕಿನ ಸೆಲೆಯಾಗಿ ಕಲಾಪೋಷಕಿಯಾಗಿದ್ದ ಸುಕ್ರಜ್ಜಿಗೆ ಪದ್ಮಶ್ರೀ ಪ್ರಶಸ್ತಿಯು ಸಾಂಸ್ಕೃತಿಕ ಪರಂಪರೆಗೆ ಸಂದ ಗೌರವಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರು ಸುಕ್ರಿಯ ಕುರಿತಾಗಿ ಬರೆದ 'ಬದುಕು ಬರೆದ ಸುಕ್ರಜ್ಜಿ' ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಸಿದ್ರಾಮ ಸಿಂಧೆ, ಸದಸ್ಯರಾದ ಆನಂದಪ್ಪ ಜೋಗಿ, ಕೆ.ಎಂ. ಮೇತ್ರಿ, ಲೇಖಕಿ ಸಿ.ಸಿ. ಹೇಮಲತಾ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT