ಭಾನುವಾರ, ಮಾರ್ಚ್ 26, 2023
23 °C

ಹೊಸಪೇಟೆ: ಕೋವಿಡ್‌ ಸಹಾಯ ಹಸ್ತ ಅಭಿಯಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿರುವ ಕೋವಿಡ್‌–19 ಸಹಾಯ ಹಸ್ತ ಅಭಿಯಾನ ಭಾನುವಾರ ನಗರದಲ್ಲಿ ಆರಂಭಗೊಂಡಿತು.

ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿ ಸಂಗ್ರಹಿಸಿ ಕೆಪಿಸಿಸಿಗೆ ಕಳುಹಿಸಿಕೊಡುವುದು ಅಭಿಯಾನದ ಮುಖ್ಯ ಉದ್ದೇಶ.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರು ನಗರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ‘ಕೋವಿಡ್‌ನಿಂದ ಸಂಬಂಧಿಕರನ್ನು ಕಳೆದುಕೊಂಡವರ ಮನೆಗಳಿಗೆ ಭೇಟಿ ನೀಡಿ, ಅವರಿಗೆ ಸಾಂತ್ವನ ಹೇಳಲಾಗುತ್ತಿದೆ. ಅವರ ಮಾಹಿತಿ ಸಂಗ್ರಹಿಸಿ, ಕೆಪಿಸಿಸಿಗೆ ಕಳುಹಿಸಿಕೊಡಲಾಗುತ್ತದೆ. ಮೃತರ ಕುಟುಂಬದವರಿಗೆ ಪರಿಹಾರ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ತಿಳಿಸಿದರು.

ನಗರದ ಚಿತ್ತವಾಢ್ಗಿ, ಆಶ್ರಯ ಕಾಲೊನಿ, ಕಾರಿಗನೂರು, ಪಟೇಲ್‌, ತಾಲ್ಲೂಕಿನ ಕೊಂಡನಾಯಕನಹಳ್ಳಿಗೆ ಕಾರ್ಯಕರ್ತರು ತೆರಳಿ ಮಾಹಿತಿ ಸಂಗ್ರಹಿಸಿದರು.

ಮುಖಂಡರಾದ ರಾಮನಗೌಡ, ಎಸ್.ಬಿ.ಮಂಜುನಾಥ್, ತೇಜಾನಾಯ್ಕ್, ಯಂಕೋಬಪ್ಪ, ಜಿ.ರಘು, ಡಿ.ಕುಬೇರ, ಅಬ್ದುಲ್ ರೌಫ್, ವಿಜಯ ಕುಮಾರ್, ಇಂದುಮತಿ, ಸೋಮಪ್ಪ, ಅಸ್ಲಂ ಮಾಳಗಿ, ನನ್ನೆಬೀ, ಅಣ್ಣಾಮಲೈ, ನವಾಜ್, ಗಾಳೆಪ್ಪ, ಗಂಗಮ್ಮ, ಗೀತಾ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು