ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಮೊದಲ ಮಳೆಯ ಸಿಂಚನ

Published 12 ಏಪ್ರಿಲ್ 2024, 8:33 IST
Last Updated 12 ಏಪ್ರಿಲ್ 2024, 8:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಹತ್ತು ನಿಮಿಷಗಳ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತುಸು ಸಾಂತ್ವನ ಸಿಗುವಂತಾಯಿತು.

ಬೆಳಿಗ್ಗೆಯಿಂದಲೇ ಚದುರಿದಂತೆ ಮೋಡದ ವಾತಾವರಣ ಇತ್ತು. ಸೆಖೆ ತೀವ್ರವಾಗಿತ್ತು ಮತ್ತು ಮೈ ಕೈಯಲ್ಲಿ ತುರಿಕೆ, ಕಡಿಯುವಂತಹ ವಾತಾವರಣ ಇತ್ತು. ಮಧ್ಯಾಹ್ನ 1.35ರ ಸುಮಾರಿಗೆ ಆರಂಭವಾದ ಹತ್ತು ನಿಮಿಷ ಸಾಧಾರಣವಾಗಿ ಸುರಿದು ಬಳಿಕ ಕಡಿಮೆಯಾಯಿತು. ಇದರಿಂದಾಗಿ ರಸ್ತೆಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಹರಿಯಿತು.

ಜಿಲ್ಲೆಯ ಅರಸೀಕೆರೆ ಭಾಗದಲ್ಲಿ ಮಂಗಳವಾರ ರಾತ್ರಿ ಸ್ವಲ್ಪ ಮಳೆಯಾಗಿತ್ತು. ಅದುವೇ ಈ ವರ್ಷದ ಜಿಲ್ಲೆಯ ಮೊದಲ ಮಳೆಯಾಗಿತ್ತು. ಹೊಸಪೇಟೆಯಲ್ಲಿ ಶುಕ್ರವಾರ ಸುರಿದ ಮಳೆ ಈ ವರ್ಷದ ಮೊದಲ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT